ವಾಯು ಪಡೆ ಸೇರಿದ HAL ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್

Social Share

ನವದೆಹಲಿ,ಅ. 3 – ಭಾರತೀಯ ವಾಯುಪಡೆಯ ಬತ್ತಳಿಕೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ ಸೇರ್ಪಡೆಗೊಂಡಿದೆ. ಬಹುಪಾತ್ರದ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಹಾರಿಸುವ ಸಾಮಥ್ರ್ಯ ಹೊಂದಿರುವ ಲಘು ಯುದ್ಧ ಹೆಲಿಕಾಪ್ಟರ್(ಎಲ್‍ಸಿಎಚ್)ಅನ್ನು ಹಿಂದೂಸ್ತಾನ್ ಏರೋನೊಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಅಭಿವೃದ್ಧಿಪಡಿಸಿ ಹಲವಾರು ಪ್ರಯೋಗ, ಪರೀಕ್ಷೆ ನಂತರ ಇಂದು ವಾಯುಪಡೆಗೆ ಮೊದಲ ಲಘು ಯುದ್ಧ ಹೆಲಿಕಾಪ್ಟರ್‍ನ್ನು ಸೇರಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಯುಪಡೆ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರ ಉಪಸ್ಥಿತಿಯಲ್ಲಿ ಜೋಧ್‍ಪುರದಲ್ಲಿ ನಡೆದ ಸಮಾರಂಭದಲ್ಲಿ ಇದನ್ನು ಐಎಎಫ್‍ಗೆ ಸೇರ್ಪಡೆಗೊಳಿಸಲಾಗಿದೆ. ಇದನ್ನು ಪ್ರಾಥಮಿಕವಾಗಿ ಎತ್ತರದ ಪ್ರದೇಶಗಳಿಗೆ ನಿಯೋಜಿಸಲು ನಿರ್ಧರಿಸಲಾಗಿದೆ. ರಕ್ಷಣಾ ಸಚಿವರು ಹೊಸ ಹೆಲಿಕಾಪ್ಟರ್‍ಗಳ ಸೇರ್ಪಡೆಯು ಐಎಎಫ್‍ನ ಯುದ್ಧ ಪರಾಕ್ರಮಕ್ಕೆ ದೊಡ್ಡ ಕೊಡುಗೆ ಎಂದು ಟ್ವಿಟರ್ ಫೋಸ್ಟ್‍ನಲ್ಲಿ, ಹೇಳಿದರು.

5.8ಟನ್ ತೂಕದ ಅವಳಿ ಎಂಜಿನ್ ಹೆಲಿಕಾಪ್ಟರ್ ಈಗಾಗಲೇ ವಿವಿಧ ಶಸ್ತ್ರಾಸ್ತ್ರಗಳ ಗುಂಡಿನ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮಾರ್ಚ್‍ನಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ ಕ್ಯಾಬಿನೆಟ್ ಸಮಿತಿ 3,887 ಕೋಟಿ ರೂಪಾಯಿ ವೆಚ್ಚದಲ್ಲಿ ಎಚ್‍ಎಎಲ್ ನಿಂದ 15 ಸೀಮಿತ ಸರಣಿಯ ಹೆಲಿಕಾಪ್ಟರ್‍ಖರೀದಿಗೆ ಅನುಮೋದನೆ ನೀಡಿದೆ.

ಇದರಿಂದ ಐಎಎಫ್‍ಗೆ 10 ಮತ್ತು ಭಾರತೀಯ ಸೇನೆಗೆ ಐದು ಹೆಲಿಕಾಪ್ಟರ್‍ಗಳು ಸಿಗಲಿವೆ ಸುಧಾರಿತ ಲಘು ಹೆಲಿಕಾಪ್ಟರ್ ಧ್ರುವದ ಹೋಲಿಕೆ ಹೊಂದಿದು,್ದ ಹಲವಾರು ರಹಸ್ಯ ವೈಶಿಷ್ಟ್ಯಗಳು, ಶಸ್ತ್ರಸಜ್ಜಿತ-ರಕ್ಷಣಾ ವ್ಯವಸ್ಥೆಗಳು, ರಾತ್ರಿ ದಾಳಿ ಸಾಮಥ್ರ್ಯ ಮತ್ತು ಉತ್ತಮ ರಕ್ಷಣ ವ್ಯವಸ್ಥೆ ಕ್ರ್ಯಾಶ್-ಯೋಗ್ಯ ಲ್ಯಾಂಡಿಂಗ್ ಗೇರ್ ಅನ್ನು ಹೊಂದಿದೆ. ಐಎಎಫ್ ಮತ್ತು ಭಾರತೀಯ ಸೇನೆಯ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸಲು ಇದು ಪ್ರಬಲ ಶಕ್ತಿ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

Articles You Might Like

Share This Article