Saturday, September 23, 2023
Homeಇದೀಗ ಬಂದ ಸುದ್ದಿಚಾಮರಾಜನಗರ ಬಳಿ ವಿಮಾನ ಪತನ

ಚಾಮರಾಜನಗರ ಬಳಿ ವಿಮಾನ ಪತನ

- Advertisement -

ಕೊಳ್ಳೆಗಾಲ,ಜೂ.1 – ಬೆಂಗಳೂರಿನ ಎಚ್ ಎ ಎಲ್ ನಿಂದ ತರಬೇತಿಗಾಗಿ ಬಂದಿದ್ದ ಲಘು ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಚಾಮರಾಜನಗರ ಬಳಿಯ ಬೋಗಾಪುರದ ಬಳಿ ಪತನಗೊಂಡು ಹೊತ್ತಿ ಉರಿದಿದೆ.

ಅದೃಷ್ಟವಶಾತ್ ಇಬ್ಬರು ಪೈಲಟ್‍ಗಳಾದ ತೇಜ್‍ಪಾಲ್ ಮತ್ತು ಭೂಮಿಕಾ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಚಾಮರಾಜನಗರ ಮಾರ್ಗವಾಗಿ ತರಬೇತಿಗಾಗಿ ಬಂದಿದ್ದಾಗ ಹಾರಾಟದ ವೇಳೆ ಎಂಜಿನ್‍ನಲ್ಲಿ ತಾಂತ್ರಿಕ ದೋಷ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ.

- Advertisement -

ತಕ್ಷಣ ಎಚ್ಚೆತ್ತುಕೊಂಡು ಪೈಲಟ್‍ಗಳು ಪ್ಯಾರಾಚೂಟ್ ಸಹಾಯದಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಚ್ ಎ ಎಲ್ ಗೆ ಸೇರಿದ ಈ ಲಘುವಿಮಾನ ಇಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ಹಾರಾಟ ನಡೆಸುತ್ತಿತ್ತು.

ಬಿಎಸ್‍ಎಫ್ ಗುಂಡೇಟಿಗೆ ಪಾಕ್ ನುಸುಳುಕೋರ ಫಿನಿಶ್

ಫ್ಲೈಟ್ ಲೆಪ್ಟಿನೆಂಟ್ ತೇಜ್ ಪಾಲ್ ಅವರು ಭೂಮಿಕಾ ಅವರಗೆ ತರಬೇತಿ ನೀಡುತ್ತಿದ್ದರು. ಆ ವೇಳೆ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಇಬ್ಬರು ಪ್ಯಾರಾಚೂಟ್ ಸಹಾಯದಿಂದ ಹೊರಗೆ ಜಿಗಿಯುತ್ತಿದ್ದಂತೆ ವಿಮಾನ ನೆಲಕ್ಕಪ್ಪಳಿಸಿ ಹೊತ್ತಿ ಉರಿದಿದೆ. ಗಾಯಗೊಂಡಿರುವ ಇಬ್ಬರು ಪೈಲೆಟ್‍ಗಳನ್ನು ಕಮಾಂಡೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಎಚ್ ಎ ಎಲ್ ಅಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ವಿಮಾನ ಪತನಗೊಂಡಿರುವ ವಿಷಯ ಕಾಡ್ಗಿಚ್ಚಿನಂತೆ ಹರಡಿ ಬೋಗಾಪುರ ಗ್ರಾಮದ ನಿವಾಸಿಗಳು ಅದನ್ನು ನೋಡಲು ಕುತೂಹಲದಿಂದ ಸ್ಥಳಕ್ಕೆ ದೌಡಾಯಿಸಿದ್ದರು.

IAF, #Trainee, #Aircraft, #crashes, #Chamarajanagar,

- Advertisement -
RELATED ARTICLES
- Advertisment -

Most Popular