ಗ್ರಾಮೀಣ ವಿದ್ಯಾರ್ಥಿಗಳಿಗೆ ಐಎಎಸ್/ ಕೆಎಎಸ್ ಉಚಿತ ತರಬೇತಿಗೆ

Social Share

ಮಾಲೂರು, ಸೆ.18- ಬಡವ, ರೈತರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಐಎಎಸ್/ ಕೆಎಎಸ್ ಅಧ್ಯಯನ ಮಾಡಲು ನೆರವಾಗುವ ಸನ್ಮಿತ್ರರ ಸಹಕಾರದಿಂದ ಕೋಲಾರದಲ್ಲಿ ಆರಂಭಿಸಲಾಗಿರುವ ಅಕಾಡೆಮಿಯಲ್ಲಿ ಉಚಿತವಾಗಿ ಎಲ್ಲ ಸೌಲಭ್ಯ ಬಳಸಿಕೊಂಡು ಉನ್ನತ ಹುದ್ದೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಕರೆ ನೀಡಿದರು.

ತಾಲೂಕು ಒಕ್ಕಲಿಗರ ನೌಕರರ ಸಂಘದ ಹಮ್ಮಿಕೊಂಡಿದ್ದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು ಅಕಾಡೆಮಿಯಲ್ಲಿ ಅಧ್ಯಯನಕ್ಕೆ ಪೂರಕ ಸಾಮಗ್ರಿ ಒದಗಿಸುವಲ್ಲಿ ನೆರವಾಗುವ ಖ್ಯಾತ ಅಧ್ಯಾಪಕರನ್ನು ಪ್ರತಿವಾರ ಇಲ್ಲಿಗೆ ಆಹ್ವಾನಿಸಿ ಅವರಿಂದ ಬೋಧನೆಯನ್ನು ಮಾಡಿಸಲಾಗುತ್ತಿದೆ. ಇದರ ನೆರವನ್ನು ಪಡೆಯಲು ಸಮಾಜದ ಎಲ್ಲ ವರ್ಗದವರಿಗೂ ಆಹ್ವಾನವಿದೆ ಎಂದು ತಿಳಿಸಿದರು.

ಕೃತಜ್ಞತಾಪೂರ್ವಕವಾಗಿ ನಮಗೆ ನೀಡಿದ ಸೇವೆ, ಸಹಾಯ ಸ್ಮರಿಸಿ ಮುಂದೆ ಇದಕ್ಕೆ ಸಂವಾದಿಯಾಗಿ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ನಮ್ಮ ಆಶಯ ಅದಕ್ಕಾಗಿ ರೈತಾಪಿ ಕುಟುಂಬದಲ್ಲಿ ಜನಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ನಾವು ಅಕಾಡೆಮಿ ಆರಂಭಿಸಿದ್ದು ಬೆಳಿಗ್ಗೆ 9ರಿಂದ ಸಂಜೆ 6ವರೆಗಿನ ತರಗತಿಯ ಸಹಾಯ ಪಡೆದು ಬದ್ದತೆಯಿಂದ ಅಧ್ಯಯನ ಮಾಡಿ ಉನ್ನತ ಹುದ್ದೆ ಗಳಿಸಬೇಕೆಂದು ಹೇಳಿದರು.

ಅತ್ಯುನ್ನತ ಅಂಕಗಳಿಸಿದ ಒಕ್ಕಲಿಗ ಜನಾಂಗದ ಪಿಯುಸಿ-ಎಸ್ಸೆಸ್ಸೆಲ್ಸಿಯ 180 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ತಿಮ್ಮರಾಯಪ್ಪ, ಸರ್ಕಾರಿ ನೌಕರ ಸಂಘದ ಅಧ್ಯಕ್ಷಮುನೇಗೌಡ,ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಅಶೋಕ್, ಬೈಯಣ್ಣ, ಎನ್. ಕೆಂಪಣ್ಣ, ಉಪಪ್ರಾಂಶುಪಾಲ ಎ.ಬಿ.ರಾಮಕೃಷ್ಣ, ಎಸ್.ಎ.ವೆಂಕಟಪ್ಪ,ಎ.ಜಿ ಕೃಷ್ಣಯ್ಯ, ಸುರೇಶ್ ಎಚ್.ಇ. ನಂಜುಂಡಗೌಡ.ಎಂ, ಎಂ.ಎನ್.ವೆಂಕಟೇಶ್, ವನಿತಾ, ವಸಂತ, ವೀಣಾ, ಜಿಲ್ಲಾ ಪ್ರಶಸ್ತಿ ವಿಜೇತರಾದ ಮುನಿವೆಂಕಟಪ್ಪ , ರಾಧಮ್ಮ ಎಲ್ಲ ನೌಕರ ವರ್ಗದವರು ಹಾಜರಿದ್ದರು.

Articles You Might Like

Share This Article