ಶಿಕ್ಷಕರ ಅರ್ಹತಾ ಪರೀಕ್ಷೆ ಹಗರಣ : ಐಎಎಸ್ ಅಧಿಕಾರಿ ಪೊಲೀಸ್ ವಶಕ್ಕೆ

Social Share

ಪುಣೆ,ಜ.30-ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಸಂಬಂಧಪಟ್ಟಂತೆ ಬಂಧಿತರಾಗಿರುವ ಐಎಎಸ್ ಅಧಿಕಾರಿ ಸುಶೀಲ್ ಕೊಡ್ವಾಕರ್ ಅವರನ್ನು ಜ.31ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಮಹಾರಾಷ್ಟ್ರದ ಕೃಷಿ ಇಲಾಖೆಯ ಉಪಕಾರ್ಯದರ್ಶಿಯಾಗಿರುವ ಸುಶೀಲ್ ಕೊಡ್ವಾಕರ್ ಅವರನ್ನು ನಿನ್ನೆ ಪುಣೆಯ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದರು.
ಜನವರಿಯಲ್ಲಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿನ ಅಕ್ರಮಗಳಲ್ಲಿ ಐಎಎಸ್ ಅಧಿಕಾರಿ ಭಾಗಿಯಾಗಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಕಳೆದ ನವೆಂಬರ್‍ನಲ್ಲಿ ಕೃಷಿ ಇಲಾಖೆಗೆ ವರ್ಗಾವಣೆಯಾಗುವ ಮೊದಲು ಸುಶೀಲ್ ಅವರು ಶಿಕ್ಷಣ ಮತ್ತು ಕ್ರೀಡಾ ಇಲಾಖೆಯಲ್ಲಿ ಉಪಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಸೈಬರ ಕ್ರೈಂ ಪೊಲೀಸರ ಪರವಾಗಿ ವಕೀಲ ವಿಜಯ ಸಿನ್ಹಾ ಜಾದವ್ ಅವರು ಅಧಿಕಾರಿಯನ್ನು ಏಳು ದಿನಗಳ ಕಾಲ ವಿಚಾರಣೆಗೆ ಒಪ್ಪಿಸುವಂತೆ ಮನವಿ ಮಾಡಿದರು. ಆದರೆ ಏಳು ದಿನಗಳ ಬದಲಾಗಿ ಒಂದು ದಿನದ ಮಟ್ಟಿಗೆ ಪೊಲೀಸರ ವಶಕ್ಕೆ ನೀಡಲಾಗಿದೆ.
ಹಗರಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವಾರು ಅಕ್ರಮಗಳು ನಡೆದಿವೆ ಎಂದು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈವರೆಗೂ 12 ಮಂದಿಯನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

Articles You Might Like

Share This Article