19 ಐಎಎಸ್ ಅಧಿಕಾರಿಗಳ ವರ್ಗಾವಣೆ, ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ..!

Social Share

ಬೆಂಗಳೂರು,ಜ.25-ಆಡಳಿತವರ್ಗಕ್ಕೆ ಮತ್ತೆ ಮೇಜರ್ ಸರ್ಜರಿ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 19 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಳೆದ ಡಿಸೆಂಬರ್ ತಿಂಗಳ ಕೊನೆಯ ದಿನ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಆಡಳಿತ ವರ್ಗದಲ್ಲಿ ಭಾರೀ ಬದಲಾವಣೆ ಮಾಡಿದ್ದ ಮುಖ್ಯಮಂತ್ರಿಯವರು ಪುನಃ ಮತ್ತೆ ಸರ್ಜರಿ ನಡೆಸಿದ್ದಾರೆ.
ವಿಶೇಷವೆಂದರೆ ನಿನ್ನೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದ ಬೆನ್ನಲ್ಲೇ ಇದೀಗ ಆಡಳಿತದಲ್ಲೂ ಮಹತ್ವದ ಬದಲಾವಣೆ ಮಾಡಿದ್ದಾರೆ. ಇಂದು 19 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಕಾರಿಗಳ ಪಟ್ಟಿ
1. ಅನಿಲ್‍ಕುಮಾರ್.ಬಿ.ಎಚ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ.
2.ಡಾ.ಶಾಮಲ ಇಕ್ಬಾಲ್ – ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ.
3. ಕನಗವಲ್ಲಿ – ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ.
4. ವಸಿರೆಡ್ಡಿ ವಿಜಯ ಜೋಸ್ನಾ – ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ.
5. ಯಶವಂತ್.ವಿ ಗುರುಕರ್ – ಉಪಆಯುಕ್ತರು, ಕಲಬುರಗಿ ಜಿಲ್ಲೆ.
6. ಎಬ್ಸಿಬಾ ರಾಣಿ ಕೊರಲಪಟಿ- ವ್ಯವಸ್ಥಾಪಕ ನಿರ್ದೇಶಕರು, ಕವಿಕಾ
7. ಕೆ.ಎ.ದಯಾನಂದ್- ಆಯುಕ್ತರು , ಹಿಂದುಳಿದ ವರ್ಗ
8. ಜಗದೀಶ್.ಜಿ – ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
9. ಕೆ.ಎಸ್.ಲತಕುಮಾರಿ- ನಿರ್ದೇಶಕರು, ಹಿರಿಯ ನಾಗರಿಕ ಮತ್ತು ವಿಕಲಚೇತನ ಕಲ್ಯಾಣ.
10. ವೆಂಕಟ್‍ರಾಜ- ಉಪ ಆಯುಕ್ತರು, ಕೋಲಾರ ಜಿಲ್ಲೆ
11. ಶಿಲ್ಪಾ ನಾಗ್ – ಆಯುಕ್ತರು, ಗ್ರಾಮೀಣಾಭಿವೃದ್ಧಿ
12. ನಲ್ಮಿ ಅತುಲ್- ಪರೀಕ್ಷಾ ನಿಯಂತ್ರಕರು, ಕೆಪಿಎಸ್‍ಸಿ
13. ಶಿಲ್ಪಾ ಶರ್ಮ – ಆಯುಕ್ತರು, ಪಂಚಾಯತ್‍ರಾಜ್
14. ಎನ್.ಎಂ.ನಾಗರಾಜ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ವೈದ್ಯಕೀಯ ಪೂರÉೈಕೆ ನಿಗಮ.
15. ಶೇಖ್ ತನ್ವೀರ್ ಅಸೀಫ್ -ಹೆಚ್ಚುವರಿ ಆಯುಕ್ತರು, ಅಬಕಾರಿ ಇಲಾಖೆ.
16. ಲಿಂಗಮೂರ್ತಿ-ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ
17. ಇಬ್ರಾಹಿಂ ಮೈಗೂರು- ಕಾರ್ಯದರ್ಶಿ, ರೇರ.
18. ಗರೀಮಾ ಪವರ್ – ಜಿಲ್ಲಾ ಪಂಚಾಯತ್ ಸಿಇಓ, ಯಾದಗಿರಿ
19. ಪಟೇಲ್ ಭುವನೇಶ್ ದೇವಿದಾಸ್- ವ್ಯವಸ್ಥಾಪಕ ನಿರ್ದೇಶಕರು, ಈಶಾನ್ಯ ಸಾರಿಗೆ ಸಂಸ್ಥೆ-

Articles You Might Like

Share This Article