ಬೆಂಗಳೂರು,ಫೆ.20- ಮಹಿಳಾ ಅಧಿಕಾರಿಗಳ ವಾಕ್ಸಮರದ ವಿರುದ್ಧ ಸಿಎಂ ನೋಟಿಸ್ ನೀಡುವಂತೆ ಸೂಚಿಸಿರುವ ಬೆನ್ನಲ್ಲೇ ಇಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿಯಾಗಿ ಲಿಖಿತ ದೂರು ಸಲ್ಲಿಸಿದ್ದಾರೆ.
ವಿಧಾನಸೌಧಕ್ಕೆ ಆಗಮಿಸಿದ ಸಿಂಧೂರಿ ಅವರು ವಂದಿತಾ ಶರ್ಮ ಅವರಿಗೆ 3 ಪುಟಗಳ ಲಿಖಿತ ದೂರು ನೀಡಿ ನಂತರ ಮಾತನಾಡಿದ ಅವರು ಮಾಧ್ಯಮಗಳ ಮುಂದೆ ಬರ ಬಾರದೆಂಬ ನಿಯಮವಿದೆ ಹಾಗಾಗಿ ನಾನು ಮಾತನಾಡಲಿಲ್ಲ. ನನ್ನ ಬಗ್ಗೆ ಇಲ್ಲಸಲ್ಲ್ದ ಆರೋಪ ಮಾಡಿದ ಹಿನ್ನೆಲೆ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದೇನೆ ಎಂದರು.
ಜೂನ್ ತಿಂಗಳೊಳಗೆ 8 ಸಾವಿರ ಶಾಲಾ ಕೊಠಡಿಗಳು ನಿರ್ಮಾಣ : ಸಿಎಂ
ನನ್ನ ಕಾರ್ಯವ್ಯಾಪ್ತಿ ಬೇರೆ ಅವರ ಕಾರ್ಯವ್ಯಾಪ್ತಿ ಬೇರೆ. ಅವರು ನನ್ನ ವೈಯುಕ್ತಿಕ ವಿಚಾರಗಳನ್ನು ಮಾತನಾಡಿದ್ದಾರೆ. ಅವರ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟ ಪಡಿಸಿದರು.
ಮುಖ್ಯಕಾರ್ಯದರ್ಶಿ ಅವರಿಗೆ ದೂರು ನೀಡಿದ್ದು, ಅದನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.
ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಅಸಾಧ್ಯ : ರಮೀಜ್ ರಾಜಾ
ಐಪಿಎಸ್ ಅಧಿಕಾರಿ ರೂಪ ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಸಿಎಸ್.ವಂದಿತಾ ಶರ್ಮ ಅವರಿಗೆ ಮಾಹಿತಿ ನೀಡಿದ್ದೇನೆ ಎಂದರು.
Row, between, IAS, Rohini Sindhuri, IPS, Roopa, Chief Secretary,