ನವದೆಹಲಿ.ಅ.4- ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳು ಜಾಹೀರಾತು ಪ್ರಕಟಿಸುವಾಗ ಆನ್‍ಲೈನ್ ಬೆಟ್ಟಿಂಗ್ ಅ್ಯಪ್‍ಗಳನ್ನು ದೂರ ಇಡಬೇಕೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ.
ಆನ್‍ಲೈನ್ ಬೆಟ್ಟಿಂಗ್ ಪ್ರಸ್ತುತ ಆರ್ಥಿಕ ಮತ್ತು ಸಾಮಾಜಿಕ-ಆರ್ಥಿಕ ಅಪಾಯ ಉಂಟುಮಾಡುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.ದೇಶದ ಹೆಚ್ಚಿನ ಭಾಗಗಳಲ್ಲಿ ಬೆಟ್ಟಿಂಗ್ ಮತ್ತು ಜೂಜಾಟವು ಕಾನೂನುಬಾಹಿರವಾಗಿದೆ,ಸಾರ್ವಜನಿಕ ಹಿತಾಸಕ್ತಿಯಿಂದ ಈ ಸಲಹೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.
ಆನ್‍ಲೈನ್ ಬೆಟ್ಟಿಂಗ್ ವೆಬ್‍ಸೈಟ್‍ಗಳು/ಪ್ಲಾಟ್‍ಫಾರ್ಮ್‍ಗಳ ಹಲವಾರು ಜಾಹೀರಾತುಗಳು ಮುದ್ರಣ, ಎಲೆಕ್ಟ್ರಾನಿಕï, ಸಾಮಾಜಿಕ ಮತ್ತು ಆನ್‍ಲೈನ್ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಕೂಡಲೆ ಇದರಿಂದ ದೂರವಿರುವಂತೆ ಎಂದು ಸಚಿವಾಲಯ ಹೇಳಿದೆ.