ಕ್ರಿಕೆಟ್ ಟೆಸ್ಟ್ ರ‍್ಯಾಂಕಿಂಗ್ : 5ನೇ ಸ್ಥಾನಕ್ಕೆ ಕುಸಿದ ಟಿಂ ಇಂಡಿಯಾ

Social Share

ನವದೆಹಲಿ, ಜ.15- ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲಿನ ನಂತರ ವಿಶ್ವಟೆಸ್ಟ್ ರ‍್ಯಾಂಕಿಂಗ್‍ನಲ್ಲಿ ಭಾರತ ಐದನೆ ಸ್ಥಾನಕ್ಕೆ ಕುಸಿದಿದೆ.
ಸತತ ಗೆಲುವಿನಿಂದ ನಂ.1 ಸ್ಥಾನದಲ್ಲಿದ್ದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಪ್ರಥಮ ಪಂದ್ಯ ಗೆದ್ದು ಬೀಗಿತ್ತು.
ಆದರೆ, ಉಳಿದೆರಡು ಪಂದ್ಯಗಳಲ್ಲಿ ಸೋಲು ಕಂಡು ಸರಣಿ ಗೆಲ್ಲುವ ಗುರಿಯನ್ನು ಕೈಚೆಲ್ಲಿತ್ತು. ಇದಾದ ಒಂದೇ ದಿನದಲ್ಲಿ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ಏರಿಳಿತಗಳು ಕಂಡುಬಂದಿದ್ದು, ಶ್ರೀಲಂಕಾ ಪ್ರಥಮ ಸ್ಥಾನಕ್ಕೆ ಜಿಗಿದಿದೆ.
ಎರಡನೆ ಸ್ಥಾನದಲ್ಲಿ ಆಸ್ಟ್ರೇಲಿಯಾ, ಮೂರನೆ ಸ್ಥಾನದಲ್ಲಿ ಪಾಕಿಸ್ತಾನ, ನಾಲ್ಕನೆ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ಐದನೆ ಸ್ಥಾನಕ್ಕೆ ಭಾರತ ಬಂದು ನಿಂತಿದೆ. ನಂತರದ ಸ್ಥಾನಗಳಲ್ಲಿ ನ್ಯೂಜಿಲೆಂಡ್, ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಕೊನೆ ಸ್ಥಾನದಲ್ಲಿ ಇಂಗ್ಲೆಂಡ್ ಇದೆ.

Articles You Might Like

Share This Article