ಬೆಂಗಳೂರು, ಜು.28- ಕನ್ನಡ ಭಾಷೆಯನ್ನು ಕಡೆಗಣಿಸಿದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ (ಐಸಿಸಿಆರ್) ಸಂಸ್ಥೆಯ ನಡೆಯನ್ನು ಕನ್ನಡ ಸಾಹಿತ್ಯ ಪರಿಷತ್ ಖಂಡಿಸಿದೆ. ಸಂಸ್ಥೆಯು ಇತ್ತೀಚೆಗೆ ನೀಡಿರುವ ಪತ್ರಿಕಾ ಜಾಹೀರಾತಿನಲ್ಲಿ ಹಿಂದಿ, ಉರ್ದು, ಸಂಸ್ಕøತ ಮತ್ತು ತಮಿಳು ಮತ್ತು ಇತರ ವಿಷಯಗಳ ಪ್ರಾಧ್ಯಾಪಕರ ಹುದ್ದೆಗಳ ನೇಮಕ ಕುರಿತು ಪ್ರಕಟಣೆ ನೀಡಿದ್ದು, ಕನ್ನಡ ವಿಷಯದ ಪ್ರಾಧ್ಯಾಪಕರ ಹುದ್ದೆ ಕುರಿತು ಪ್ರಸ್ತಾವನೆ ನೀಡಿಲ್ಲ.
ದೇಶದ ಎಲ್ಲಾ ಭಾಷೆ ಸಂಸ್ಕøತಿಗಳನ್ನು ಗೌರವಿಸಬೇಕಿದ್ದ ಕೇಂದ್ರ ಸರ್ಕಾರದ ಅೀನದಲ್ಲಿ ಇರುವ ಸಂಸ್ಥೆಯು ತಮಗೆ ಬೇಕಾದ ಕೆಲವೇ ಭಾಷೆಗಳಿಗೆ ಮಣೆ ಹಾಕುತ್ತಿರುವ ಕ್ರಮವನ್ನು ತೀವ್ರವಾಗಿ ಖಂಡಿಸುವುದರ ಜೊತೆ ತಕ್ಷಣದಲ್ಲಿ ಕನ್ನಡ ಭಾಷೆಗೆ ಸೂಕ್ತ ಗೌರವ ನೀಡಬೇಕು ಎಂದು ಎಚ್ಚರಿಸುತ್ತಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿ ತಿಳಿಸಿದ್ದಾರೆ.
ಕನ್ನಡ ಭಾಷೆಯು ಶಾಸ್ತ್ರೀಯ ಸ್ಥಾನ ಮಾನ ಹೊಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ಪೀಠ ಸ್ಥಾಪಿಸುವ ಹೊಣೆಯನ್ನೂ ಸಂಸ್ಥೆಯು ನಿರ್ವಹಿಸ ಬೇಕಿದೆ. ಐಸಿಸಿಆರ್ ಸಂಸ್ಥೆ ಈ ರೀತಿಯ ಮಹತ್ವಪೂರ್ಣ ಮತ್ತು ಘನತೆಯ ಜವಾಬ್ದಾರಿ ಮರೆತಿದೆ.
ತಜ್ಞ ಪ್ರಾಧ್ಯಾಪಕರ ಆಯ್ಕೆಗಾಗಿ ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿದ್ದಾರೆ. ಅದರಲ್ಲಿ ಕನ್ನಡ ಪ್ರಾಧ್ಯಾಪಕರ ಆಯ್ಕೆಯ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಜೊತೆಗೆ ಅವರ ಸಂಸ್ಥೆಯಲ್ಲಿ ಕನ್ನಡ ಭಾಷೆ ಸಂಸ್ಕøತಿಯ ಅಧ್ಯಯನ ಕುರಿತು ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಇವರ ಧೋರಣೆ ಗಮನಿಸಿದಾಗ ಕನ್ನಡ ವನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ತೋರುತ್ತದೆ.
ಇಂಡಿಯನ್ ಕೌನ್ಸಿಲ್ ಫಾರ ಕಲ್ಚರಲ್ ರಿಲೇಷನ್ ಸಂಸ್ಥೆಯು ಕನ್ನಡ ಭಾಷೆಯ ಗಟ್ಟಿತನ, ಪರಂಪರೆ, ವೈಭವವನ್ನು ಮರೆಯಬಾರದು. ಕನ್ನಡದ ಘನತೆ ಯನ್ನು ಕಾಪಾಡುವುದು, ಇತಿಹಾಸ ತಿಳಿಸುವುದರೊಂದಿಗೆ ಸಮೃದ್ಧತೆ ಯನ್ನು ಪ್ರಕಟಪಡಿಸಬೇಕು ಎಂದು ಪತ್ರ ಬರೆಯಲಾಗಿದೆ.
ಜತೆಗೆ, ಕೇಂದ್ರ ಸಚಿವರಿಗೆ ಹಾಗೂ ಮುಖ್ಯಮಂತ್ರಿಯವರಿಗೆ ಹಾಗೂ ಕನ್ನಡ ಮತ್ತು ಸಂಸ್ಖತಿ ಇಲಾಖೆ ಸಚಿವರಿಗೆ ಪತ್ರ ಬರೆದು ಐಸಿಸಿಆರ್ ಸಂಸ್ಥೆಗೆ ಕನ್ನಡ ಭಾಷೆಗೆ ಸೂಕ್ತ ಗೌರವಯುತ ಸ್ಥಾನಮಾನ ನೀಡಲು ಸೂಚಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಕೋರುತ್ತದೆ.
ದೇಶದ ಕೆಲವೇ ಕೆಲವು ಆಯ್ದ ಭಾಷೆಗಳ ಪರಿಣತರನ್ನು ಆಯ್ಕೆ ಮಾಡುವ ಮೂಲಕ ಕನ್ನಡವನ್ನು ಕಡೆಗಣಿಸಿ ಮಾಡಿದ ತಪ್ಪನ್ನು ತಕ್ಷಣದಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.