ಪನೋರಮಾ ಚಿತ್ರೋತ್ಸವದಲ್ಲಿ ಕನ್ನಡದ 3 ಚಿತ್ರಗಳ ಪ್ರದರ್ಶನ

Social Share

ನವದೆಹಲಿ, ಅ.22- ಗೋವಾದಲ್ಲಿ ನಿನ್ನೆಯಿಂದ ಆರಂಭವಾಗಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‍ಎಫ್‍ಐ)ದಲ್ಲಿ ಜೈ ಭೀಮ್, ಮೇಜರ, ದಿ ಕಾಶ್ಮೀರ್ ಪೈಲ್ ಸೇರಿದಂತೆ 25ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

2022ರ ಸಾಲಿನ ಭಾರತೀಯ ಪನೋರಮಾ ವಿಭಾಗಕ್ಕೆ ಹದಿನೇಲೆಂಟು ಮತ್ತು ದಿ ಶೋ ಮಸ್ಟ್ ಗೋ ಆನ್ ಎಂಬ ಚಿತ್ರಗಳು ಆರಂಭಿಕ ಪ್ರದರ್ಶನ ಕಂಡಿವೆ. ಶನಿವಾರ ಐಎಫ್‍ಎಫ್‍ಐ ವೈಶಿಷ್ಟ ಮತ್ತು ವೈಶಿಷ್ಟವಲ್ಲದ ಚಿತ್ರಗಳ ಪಟ್ಟಿಯನ್ನು ಪ್ರಕಟಿಸಿದೆ.

ಅದರಲ್ಲಿ ಭಾರತೀಯ ಭಾಷೆಗಳ 25 ಚಿತ್ರಗಳು ಸೇರಿವೆ. ಪ್ರಮುಖವಾಗಿ ಜೈ ಭೀಮ್, ಮೇಜರ್, ಅರಿಯಿಪ್ಪು, ದಿ ಕಾಶ್ಮೀರ್ ಫೈಲ್ಸ್ ಮತ್ತು ಆರ್‍ಆರ್‍ಆರ್ ಸೇರಿವೆ. ವೈಶಿಷ್ಟ್ಯವಲ್ಲದ ವಿಭಾಗದಲ್ಲಿ ತಾಂಗ್, ಅದರ್ ರೇ, ಆರ್ಟ್ ಆಫ್ ಸತ್ಯಜೀತ್ ರೇ, ಕ್ಲಿಂಟನ್ ಮತ್ತು ಫಾತಿಮಾ ಸೇರಿ 20 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಆಯ್ದ ಚಲನಚಿತ್ರಗಳನ್ನು ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಂಯ್ತಿರುವ 53 ನೇ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ರೈಲು ಬೋಗಿಯಲ್ಲಿ ನಮಾಝ್ ಮಾಡಿದವರ ವಿರುದ್ಧ ದೂರು ದಾಖಲು

ಒಟ್ಟು ಚಿತ್ರಗಲ್ಲಿ 10 ಹಿಂದಿ ಭಾಷೆಯ ಕಥಾನಕಗಳು ಸೇರಿವೆ. ತಮಿಳು, ತೆಲುಗಿನಲ್ಲಿ ತಲಾ ನಾಲ್ಕು ಚಿತ್ರಗಳು, ಬಂಗಾಳಿಯ ಎರಡು ಚಿತ್ರಗಳು, ಇಂಗ್ಲಿಷ್ ಭಾಷೆಯ ಏಳು ಚಲನಚಿತ್ರಗಳು, ಕನ್ನಡ ಮತ್ತು ಮಲಯಾಳಂನಲ್ಲಿ ಮೂರು ಚಲನಚಿತ್ರಗಳು, ಮರಾಠಿಯಲ್ಲಿ ಐದು, ಮೈಥಿಲಿ, ಕೊಂಕಣಿ, ಮಣಿಪುರಿ, ಸಂಸ್ಕೃತ, ಇರುಲಾ, ಒರಿಯಾ ಭಾಷೆಗಳ ತಲಾ ಒಂದು ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಪಿಐಬಿ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ ವಿನೋದ್ ಗಣತ್ರಾ ನೇತೃತ್ವ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡಿದೆ. ಎ.ಕಾರ್ತಿಕ್ ರಾಜಾ, ಆನಂದ ಜ್ಯೋತಿ, ಡಾ ಅನುರಾಧಾ ಸಿಂಗ್ ಮತ್ತು ಸೈಲೇಶ್ ದವೆ ಸೇರಿದಂತೆ 12 ಸದಸ್ಯರು ಸಮಿತಿಯ ಸದಸ್ಯರಾಗಿದ್ದರು.

ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಕುರಿತು ಜಮೀರ್ ಅಹ್ಮದ್ ಹೇಳಿದ್ದೇನು..?

ಕನ್ನಡದ ಹದಿನೇಲೆಂಟು, ನಾನು ಕುಸುಮಾ ವೈಶಿಷ್ಟ್ಯ ಪೂರ್ಣ ಚಿತ್ರಗಳ ಪಟ್ಟಿಯಲ್ಲಿದ್ದರೆ, ಮಧ್ಯಂತರ ವೈಶಿಷ್ಟ್ಯಪೂರ್ಣವಲ್ಲದ ಚಿತ್ರಗಳ ಪಟ್ಟಿಯಲ್ಲಿ ಸೇರಿದೆ.

Articles You Might Like

Share This Article