ಮೈಸೂರಿನ ಸಿವಿಲ್ ಕಾಂಟ್ರಾಕ್ಟರ್ ಕುನಾಲ್‍ಗೆ ಐಐಬಿ ಪ್ರಶಸ್ತಿ

Social Share

ಮೈಸೂರು : ಬೆಂಗಳೂರಿನ ಐಕಾನ್ಸ್ ಆಫ್ ಬ್ಯುಸಿನೆಸ್ ಮ್ಯಾಗಝೈನ್ (ಐಐಬಿ
ನಿಯತಕಾಲಿಕ)ದ ವತಿಯಿಂದ ಉದ್ಯಮ ಉತ್ಕøಷ್ಟತೆ ಮತ್ತು ನಾಯಕತ್ವ-2022 ಪ್ರಶಸ್ತಿಗಳನ್ನು ನೀಡಲಾಗಿದೆ.

ಮೈಸೂರಿನ ಯುವ ಸಿವಿಲ್ ಕಾಂಟ್ರಾಕ್ಟರ್ ಮತ್ತು ಶ್ರೀ ನರಸಿಂಹ ಕನ್ಸ್‍ಟ್ರಕ್ಷನ್ಸ್ ಮಾಲೀಕ ಕುನಾಲ್ ರಾಘವೇಂದ್ರ ಅವರಿಗೆ ಐಐಬಿ ಬೆಸ್ಟ್ ಕನ್ಸಟ್ಲಿಂಗ್ ಸಿವಿಲ್ ಎಂಜಿನಿಯರ್ಸ್ ಅಂಡ್ ಸಿವಿಲ್ ಕಾಂಟ್ರಾಕ್ಟರ್ಸ್ ಅವಾರ್ಡ್-2022 ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಭಾನುವಾರ
ನೀಡಲಾಯಿತು.

ಕೈಗಾರಿಕೋದ್ಯಮಿಗಳಿಗೆ, ಸಣ್ಣ ಉದ್ದಿಮೆದಾರರಿಗೆ, ವ್ಯವಹಾರ ಮುಖ್ಯಸ್ಥರಿಗೆ,
ವರ್ತಕರಿಗೆ ಹಾಗೂ ಸಾಧಕರಿಗೆ ನೀಡಲಾಗುವ ಐಐಬಿ ಇಂಡಸ್ಟ್ರಿ ಎಕ್ಸೆಲೆನ್ಸ್ ಅಂಡ್ ಲೀಡರ್‍ಶಿಪ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.

Articles You Might Like

Share This Article