ನವದೆಹಲಿ,ಜು.15- ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟದ ಅಧ್ಯಯನ ವರದಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರಪ್ರದಾನ್ ಇಂದು ಬಿಡುಗಡೆ ಮಾಡಿದ್ದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ವವಿದ್ಯಾಲಯ ದೇಶದಲ್ಲಿ ಉನ್ನತ ಸ್ಥಾನ ಪಡೆದಿದೆ.
ಸತತವಾಗಿ ನಾಲ್ಕನೆ ವರ್ಷವೂ ರ್ಯಾಂಕಿಂಗ್ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ರಾಷ್ಟ್ರೀಯ ರ್ಯಾಂಕಿಂಗ್‍ನಲ್ಲಿ ಐಐಟಿ ಮದ್ರಾಸ್ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರಿನ ಐಐಎಸ್‍ಸಿ ದ್ವಿತೀಯ, ಬಾಂಬೆಯ ಐಐಟಿ ತೃತೀಯ ಸ್ಥಾನದಲ್ಲಿವೆ.
ವಿಶ್ವವಿದ್ಯಾಲಯಗಳ ರ್ಯಾಂಕಿಂಗ್‍ನಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಎರಡನೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಪಾತ್ರವಾಗುವ ಮೂಲಕ ಬೆಂಗಳೂರಿನ ಗರಿಮೆಯನ್ನು ಹೆಚ್ಚಿಸಿದೆ. ದೆಹಲಿಯ ಜೆಎನ್‍ಯು ಎರಡನೇ ಸ್ಥಾನ, ಜಾಮೀಯಾ ಮಹಿಳಾ ಇಸ್ಲಾಮಿಯ ಮೂರನೇ ಸ್ಥಾನದ ವಿವಿಗಳಾಗಿವೆ. ಐಐಟಿ ಮದ್ರಾಸ್ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜಾಗಿದ್ದು, ಐಐಟಿ ಡೆಲ್ಲಿ, ಐಐಟಿ ಬಾಂಬೆ ನಂತರದ ಸ್ಥಾನಗಳನ್ನು ಪಡೆದಿವೆ.
ಫಾರ್ಮಸಿ ಸಂಸ್ಥೆಗಳಲ್ಲಿ ಜಾಮೀಯ ಹಮ್‍ರ್ದ ಮೊದಲ ಸ್ಥಾನ, ಹೈದಾರಾಬಾದ್ ರಾಷ್ಟ್ರೀಯ ಔಷೀಯ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆ ದ್ವಿತೀಯ ಸ್ಥಾನ, ಚಂಡೀಘಡ್‍ನ ಪಂಜಾಬ್ ವಿಶ್ವವಿದ್ಯಾನಿಲಯ ಮೂರನೆ ರ್ಯಾಂಗ್ ಪಡೆದಿದೆ.
ದೇಶದಲ್ಲಿ ಐದು ಅತ್ಯುತ್ತಮ ಕಾಲೇಜುಗಳ ವರ್ಗೀಕರಣದಲ್ಲಿ ದೆಹಲಿಯ ಮಿರಿಂದಾ ಹೌಸ್ ಕಾಲೇಜು ಪ್ರಥಮ, ಹಿಂದೂ ಕಾಲೇಜು ದ್ವಿತೀಯ, ಚನ್ನೈನ ಪ್ರೆಸಿಡೆನ್ಸಿ ಕಾಲೇಜು ತೃತೀಯ ಸ್ಥಾನ ಪಡೆದಿವೆ.
ದೆಹಲಿಯ ಏಮ್ಸ್ ಉತ್ತಮ ವೈದ್ಯಕೀಯ ಕಾಲೇಜಿನ ಶ್ರೇಣಿಯನ್ನು ಕಾಯ್ದುಕೊಂಡಿದೆ. ಚಂಡೀಘಡ್‍ನ ಪಿಜಿಐಎಂಇಆರ್ ಮತ್ತು ತಮಿಳುನಾಡು ವೆಲ್ಲೂರ್‍ನ ಸಿಎಂಸಿ ವೈದ್ಯಕೀಯ ಕಾಲೇಜುಗಳು ನಂತರದ ಕ್ರಮಾಂಕದಲ್ಲಿವೆ.
ನಿರ್ವಹಣಾ ಶಿಕ್ಷಣದಲ್ಲೂ ರ್ಯಾಂಕಿಂಗ್ ಘೋಷಿಸಲಾಗಿದ್ದು, ಅಹಮದಾಬಾದ್‍ನ ಐಐಎಂ ಪ್ರಥಮ ಸ್ಥಾನ ಪಡೆದರೆ, ಬೆಂಗಳೂರು ಮತ್ತು ಕೊಲ್ಕತ್ತಾದ ಐಐಎಂಗಳು ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿದೆ.