ಹೈದ್ರಾಬಾದ್ ತಜ್ಞರ ಭೇಟಿ, ಮೆಟ್ರೋ ದುರಂತ ಮುಚ್ಚಿಹಾಕಲು ನಡೆದಿದೆಯಾ ಯತ್ನ..?

Social Share

ಬೆಂಗಳೂರು,ಜ.13- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬೀದ್ದಿರುವುದನ್ನು ಪತ್ತೆ ಹಚ್ಚಲು ಇಂದು ನಗರಕ್ಕೆ ಹೈದ್ರಾಬಾದ್ ಮೂಲದ ಐಐಟಿ ತಜ್ಞರು ಆಗಮಿಸಿದ್ದಾರೆ. ನಾಗವಾರ ಸಮೀಪ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ್ದರು. ಈ ಘಟನೆಗೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆಯೇ ಕಾರಣ ಎಂದು ಆರೋಪಿಸಲಾಗಿತ್ತು.

ಹೀಗಾಗಿ ಸತ್ಯಾಸತ್ಯತೆ ಪರಿಶೀಲನೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಹೆಗಲಿಗೆ ವಹಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಐಐಎಸ್‍ಸಿ ವಿಜ್ಞಾನಿ ಚಂದ್ರ ಕೀಶನ್ ಅವರು ಮೇಲ್ನೋಟಕ್ಕೆ ಕಾಮಗಾರಿ ನಿರ್ವಹಿಸುವ ಗುತ್ತಿಗೆ ಸಂಸ್ಥೆಯ ಬೇಜವಬ್ದಾರಿತನವೇ ಕಾರಣ ಒಂದೇರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿಕೆ ನೀಡಿದ್ದರು.

ಐಐಎಸ್‍ಸಿ ವಿಜ್ಞಾನಿಗಳ ಈ ಹೇಳಿಕೆ ಬೆನ್ನಲ್ಲೇ ಹೈದ್ರಾಬಾದ್ ಮೂಲದ ಐಐಟಿ ತಜ್ಞರು ಇಂದು ನಗರಕ್ಕೆ ಆಗಮಿಸಿ ಪಿಲ್ಲರ್ ಕುಸಿತದ ಕಾರಣ ಪತ್ತೆ ಹಚ್ಚಲು ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೆಟ್ರೋ ಪಿಲ್ಲರ್ ನಿರ್ಮಾಣದ ಹೊಣೆ ಹೊತ್ತಿರುವ ಗುತ್ತಿಗೆ ಸಂಸ್ಥೆಯೂ ಹೈದ್ರಾಬಾದ್ ಮೂಲವಾಗಿರುವುದರಿಂದ ಅಲ್ಲಿನ ತಜ್ಞರನ್ನು ಕರೆಸಿ ಪ್ರಮಾದಕ್ಕೆ ಎಳ್ಳು-ನೀರು ಬಿಡಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಅನುಮಾನ ಕಾಡತೊಡಗಿದೆ.

ವಿಧಾನಸೌಧ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮೆಟ್ರೋ ಮಾರ್ಗದ ಕಾಮಗಾರಿ ನಡೆಸುತ್ತಿರುವ ಸ್ಥಳವನ್ನು ಮೆಟ್ರೋ ಸಿಬ್ಬಂದಿಗಳು ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು. ಆದರೆ, ಮೆಟ್ರೋ ಸಂಸ್ಥೆಯವರು ಅನುಭವವಿಲ್ಲದ ಸಿಬ್ಬಂದಿಗಳನ್ನು ಬೇಕಾಬಿಟ್ಟಿ ನೇಮಕ ಮಾಡಿಕೊಂಡಿರುವುದು ಅವಘಡಕ್ಕೆ ಮತ್ತೊಂದು ಕಾರಣ ಎಂದು ಆರೋಪಿಸಲಾಗಿದೆ.

ಹೀಗಾಗಿ ಅಪವಾದದಿಂದ ಬಚವಾಗಲು ಹೈದ್ರಾಬಾದ್‍ನಿಂದ ತಜ್ಞರ ತಂಡ ಕರೆಸಿರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

IIT, Hyderabad, experts, Bengaluru, study, metro pillar, collapse,

Articles You Might Like

Share This Article