Saturday, September 23, 2023
Homeಇದೀಗ ಬಂದ ಸುದ್ದಿಐಐಟಿ ವಿದ್ಯಾರ್ಥಿ ಆತ್ಮಹತ್ಯೆಗೆ ಜಾತಿ ತಾರತಮ್ಯವೇ ಕಾರಣ

ಐಐಟಿ ವಿದ್ಯಾರ್ಥಿ ಆತ್ಮಹತ್ಯೆಗೆ ಜಾತಿ ತಾರತಮ್ಯವೇ ಕಾರಣ

- Advertisement -

ಮುಂಬೈ,ಜೂ 1-ಇಲ್ಲಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿ ದರ್ಶನ್ ಸೋಳಂಕಿ ಆತ್ಮಹತ್ಯೆ ಮಾಡಿಕೊಳ್ಳಲು ಕ್ಯಾಂಪಸ್‍ನಲ್ಲಿನ ಜಾತಿ ತಾರತಮ್ಯವೇ ಕಾರಣ ಎನ್ನುವುದು ತಿಳಿದುಬಂದಿದೆ.

ಸೋಳಂಕಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ತಾಯಿಗೆ ಕ್ಯಾಂಪಸ್‍ನಲ್ಲಿ ಜಾತಿ ಆಧಾರಿತ ತಾರತಮ್ಯ ಅಸ್ತಿತ್ವದಲ್ಲಿದೆ ಎಂದು ಹೇಳಿದ್ದರು ಎನ್ನುವುದನ್ನು ಪೊಲೀಸರು ಆರೋಪಪಟ್ಟಿಯಲ್ಲಿ ಸೇರಿಸಿದ್ದಾರೆ.
ಸಹ ವಿದ್ಯಾರ್ಥಿಗಳು ನನ್ನ ಜಾತಿ ಬಗ್ಗೆ ತಿಳಿದಾದ ಅವರ ನಡವಳಿಕೆಯೇ ಬದಲಾಗಿತ್ತು ಎಂದು ಸೋಳಂಕಿ ತನ್ನ ತಾಯಿಗೆ ದೂರವಾಣಿ ಮೂಲಕ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಉತ್ತರಾಖಂಡದಲ್ಲಿ ಭೂಕುಸಿತ: ನಡುರಸ್ತೆಯಲ್ಲಿ ಸಿಲುಕಿದ 300 ಯಾತ್ರಾರ್ಥಿಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸೋಳಂಕಿ ಅವರ ತಾಯಿಯ ಹೇಳಿಕೆಯು ಒಂದು ಭಾಗವಾಗಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿರುವ ಸಹ ವಿದ್ಯಾರ್ಥಿ ಅರ್ಮಾನ್ ಖತ್ರಿ ಎಂದು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಅಹಮದಾಬಾದ್ ಮೂಲದ ಬಿ-ಟೆಕ್ (ರಾಸಾಯನಿಕ) ಕೋರ್ಸ್‍ನ ಪ್ರಥಮ ವರ್ಷದ ವಿದ್ಯಾರ್ಥಿ ಸೋಳಂಕಿ, ಫೆಬ್ರವರಿ 12, 2023 ರಂದು ಮುಂಬೈನ ಪೊವೈ ಪ್ರದೇಶದ ಐಐಟಿಬಿ ಕ್ಯಾಂಪಸ್‍ನಲ್ಲಿರುವ ಹಾಸ್ಟೆಲ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದರು.

ಧರ್ಮದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ ನಂತರ ಖತ್ರಿ ಸೋಲಂಕಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಸೋಲಂಕಿ ಅವರ ತಾಯಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಡಿಸೆಂಬರ್ 2022 ರಲ್ಲಿ ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಸೋಲಂಕಿ ತನ್ನ ಸಹೋದರಿಗೆ ಕ್ಯಾಂಪಸ್‍ನಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಹೇಳಿದರು.

ಭಾರತ-ಚೀನಾ ಸಂಬಂಧ ಸುಧಾರಣೆ ಸುಲಭವಲ್ಲ; ರಾಹುಲ್

ಜನವರಿ 2023 ರಲ್ಲಿ ಮಕರ ಸಂಕ್ರಾಂತಿ ರಜೆಯ ಸಮಯದಲ್ಲಿ ಸೋಲಂಕಿ ಅವರು ತಮ್ಮ ಸಹೋದರಿಯನ್ನು ಭೇಟಿ ಮಾಡಿದಾಗ ಈ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

IITstudent, #DarshanSolanki, #suicide, #caste, #concerned, #chargesheet,

- Advertisement -
RELATED ARTICLES
- Advertisment -

Most Popular