ವಿಧಾನಸಭೆ ಚುನಾವಣೆಗೂ ಮುನ್ನ ಅಕ್ರಮ-ಸಕ್ರಮ ಜಾರಿ : ಸಚಿವ ಅಶೋಕ್

Social Share

ಬೆಂಗಳೂರು, ಆ.1- ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಕಂದಾಯ ನಿವೇಶನಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲಾ ಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನಾ ಮಂಜೂರಾತಿ ಇಲ್ಲದೆ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಆದರೆ ವಾಣಿಜ್ಯ ಉದ್ದೇಶದ ನಿರ್ಮಾಣಗಳನ್ನು ಸಕ್ರಮ ಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇತ್ಯರ್ಥವಾದ ಕೂಡಲೇ ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿ ಕೊಟ್ಟು ಸಕ್ರಮಗೊಳಿಸಲಾಗುವುದು ಎಂದರು. 40*60 ಅಳತೆಯ ನಿವೇಶನದಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ನೀಡಲಾಗುವುದು.

ರಾಜ್ಯ ಸರ್ಕಾರ ಈಗಾಗಲೇ ಈ ಸಂಬಂಧ ಜಾರಿಗೆ ತಂದಿರುವ ಕಾಯ್ದೆ ಪ್ರಕಾ ದಂಡ ವಿಧಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 5-6 ಸಾವಿರ ಕೋಟಿ ರೂ. ಆದಾಯ ದಂಡ ಶುಲ್ಕದ ರೂಪದಲ್ಲಿ ಸಂಗ್ರಹವಾಗುವ ನಿರೀಕ್ಷೆಯಿದೆ. ಇದೇ ರೀತಿ ರಾಜ್ಯದಲ್ಲಿ 20 ಸಾವಿರ ಕೋಟಿ ರೂ. ಸಂಗ್ರಹವಾಗಬಹುದು ಎಂದು ಹೇಳಿದರು.

ಅಕ್ರಮ ಸಕ್ರಮ ಜಾರಿಯಾದ ಕೂಡಲೇ ಎ-ಬಿ ಖಾತೆ ವ್ಯವಸ್ಥೆ ರದ್ದಾಗಿ ಎ ಖಾತೆ ಮಾತ್ರ ಉಳಿಯಲಿದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುವುದರಲ್ಲಿದೆ. ಮನೆ ನಿರ್ಮಿಸಿಕೊಂಡವರಿಗೂ ನೆಮ್ಮದಿ ದೊರೆಯಲಿದೆ ಎಂದರು.

3 ಪಟ್ಟು ಹೆಚ್ಚಳಕ್ಕೆ ಮನವಿ:
ನೈಸರ್ಗಿಕ ವಿಕೋಪದಿಂದ ಉಂಟಾಗುವ ಹಾನಿಗೆ ಕೇಂದ್ರ ಸರ್ಕಾರ ಎನ್‍ಡಿಆರ್‍ಎಫ್‍ನಡಿ ನೀಡುತ್ತಿರುವ ಪರಿಹಾರದ ಮೊತ್ತವನ್ನು 3 ಪಟ್ಟು ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗುವುದು.

ಈಗ ನೀಡುತ್ತಿರುವ ಪರಿಹಾರ ಏನೇನು ಸಾಲದು ಒಂದು ಕೋಟಿ ರೂ. ಮೊತ್ತದ ಆಸ್ತಿ ಹಾನಿಯದ 5 ಲಕ್ಷ ರೂ. ಮಾತ್ರ ಪರಿಹಾರ ದೊರೆಯುತ್ತದೆ. 1 ಹೆಕ್ಟೇರ್ ರಾಗಿ ಬೆಳೆ ಹಾನಿಗ 16 ಸಾವಿರ ರೂ. ಮಾತ್ರ ಪರಿಹಾರವಿದೆ. ಹೀಗಾಗಿ ಪರಿಹಾರ ಮೊತ್ತ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು.

Articles You Might Like

Share This Article