ರಾಂಚಿ, ಆ.24 – ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಅನಧಿಕೃತ ಮೂಲಗಳಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಭಂದಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಜಾರ್ಖಂಡ್‍ನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.ಕಾರ್ಯಾಚರಣೆಯ ಭಾಗವಾಗಿ ರಾಜ್ಯದಲ್ಲಿ ಸುಮಾರು 20 ಸ್ಥಳಗಳಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೆ ಬಂಧಿತರಾಗಿರುವ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ರಾಜಕೀಯ ಸಹಾಯಕ ಪಂಕಜ್ ಮಿಶ್ರಾ ಮತ್ತು ಅವರ ಸಹವರ್ತಿ ಬಚ್ಚು ಯಾದವ್ ಅವರನ್ನು ವಿಚಾರಣೆ ನಡೆಸಿದ ನಂತರ ಸಿಕ್ಕ ಮಾಹಿತಿಯು ಈ ದಾಳಿ ನಡೆದಿದೆ
ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಸಂಬಂಸಿದಂತೆ ಜಾರ್ಖಂಡ್‍ನ ಸಾಹಿಬ್ಗಂಜ, ಬರ್ಹೆತ್, ರಾಜಮಹಲ, ಮಿಜರ್ ಚೌಕಿ ಮತ್ತು ಬರ್ಹವಾರ್‍ದಲ್ಲಿ ಕಳೆದ ಜುಲೈ 8 ರಂದುಡ ಮಿಶ್ರಾ ಮತ್ತು ಅವರ ಸಹಚರರ ಸಂಸ್ಥೆ ಮೇಲೆ ಇಡಿ ದಾಳಿ ನಡೆಸಿ ಪ್ರಕರನ ದಾಖಲಿಸಿ ತನಿಖೆ ಪ್ರಾರಂಭಿಸಿತ್ತು.
ಮಿಶ್ರಾ ಮತ್ತು ಇತರರ ವಿರುದ್ಧ ಮಾರ್ಚ್‍ನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲïಎ) ಅಡಿಯಲ್ಲಿ ಇಡಿ ಮೊಕದ್ದಮೆ ದಾಖಲಿಸಿದ ನಂತರ ಈ ಕಾರ್ಯಾಚರಣೆ ಪ್ರಾರಂಭಿಸಿತ್ತು ಅಕ್ರಮವಾಗಿ ಅಪಾರ ಆಸ್ತಿಯನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಜುಲೈ ದಾಳಿಯ ನಂತರ ಇಡಿ 50 ಬ್ಯಾಂಕ್ ಖಾತೆಗಳಲ್ಲಿ 13.32 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ.
ದಾಖಲಾದ ಹೇಳಿಕೆಗಳು, ಡಿಜಿಟಲ್ ಸಾಕ್ಷ್ಯಗಳು ಮತ್ತು ದಾಖಲೆಗಳು ಸೇರಿದಂತೆ ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು, ವಶಪಡಿಸಿಕೊಂಡ ನಗದು,ಅರಣ್ಯ ಪ್ರದೇಶ ಸೇರಿದಂತೆ ಸಾಹಿಬ್ಗಂಜ್ ಪ್ರದೇಶದಲ್ಲಿ ವ್ಯಾಪಕವಾಗಿ ನಡೆಸಲಾಗುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕಮೀಷನ್ ಅಥವಾ ಹಪ್ತಾ ವಸೂಲಿ ಮೂಲಕ ಪಡೆಯಲಾಗಿದೆ ಎಂದು ಇಡಿ ಹೇಳಿದೆ.
ಜಾರ್ಖಂಡ್‍ನಲ್ಲಿ ಅಕ್ರಮ ಗಣಿಗಾರಿಕೆಯಿಂದ ಸುಮಾರು 100 ಕೋಟಿ ರೂ ಆದಾಯದ ಜಾಡು ಹಿಡಿದು ಇಡಿ ತನಿಖೆ ನಡೆಸುತ್ತಿದೆ .ಇಂದು ನಡೆದಿರುವ ದಾಳಿಯಲ್ಲಿ ಹಲವು ಪ್ರಮುಖ ದಾಖಲೆ ವಶಕ್ಕೆ ಪಡೆಯಲಾಗಿದೆ.