ಮಂಗಳೂರು,ಜ.29-ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಮರಳು ನೀತಿಯಂತೆ ರಾಜ್ಯದಲ್ಲಿ ಒನ್ ಸ್ಟೇಟ್ ಒನ್ ಜಿಪಿಎಸ್ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನಲ್ಲಿ ಮಾತನಾಡಿದ ಅವರು ಸಿಆರ್‍ಝಡ್ ಹಾಗೂ ನಾನ್ ಸಿಆರ್‍ಝಡ್‍ನಲ್ಲಿ ಮರಳು ತೆಗೆದು ನೂತನ ತಂತ್ರಜ್ಞಾನದ ಮೂಲಕ ಮರಳು ಸರಬರಾಜು ಮಾಡಲಾಗುತ್ತದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಕರ್ನಾಟಕ ರಾಜ್ಯ ಮಿನರಲ್ ಕಾಪೆರ್ರೇಷನ್‍ರವರು ನೂತನ ಆ್ಯಪ್ ತಯಾರಿ ಮಾಡಿದ್ದು, ಗ್ರಾಹಕರು ಈ ಆ್ಯಪ್ ಮೂಲಕ ಮರಳು ಪಡೆಯಬಹುದಾಗಿದೆ.
ಹೊಸ ಮರಳು ನೀತಿ 2020ರ ಪ್ರಕಾರ ಗ್ರಾಪಂ ವ್ಯಾಪ್ತಿಯ ಒಂದು, ಎರಡನೆ ಹಾಗೂ ಮೂರನೇ ಶ್ರೇಣಿಯ ಹಳ್ಳಗಳ ಪಾತ್ರದಲ್ಲಿ ಗುರುತಿಸಿ ಅಧಿಸೂಚನೆ ಹೊರಡಿಸುವ ಐದು ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಅಲ್ಲಿನ ಪಂಚಾಯ್ತಿಗಳಿಗೆ 300ರೂ. ಒಂದು ಟನ್‍ಗೆ ನೀಡಲಾಗುತ್ತಿದೆ.
ದೊಡ್ಡ ಬ್ಲಾಕ್‍ಗಳನ್ನು ಸಿಟಿ ಕಾಪೆರ್ರೇಷನ್‍ನವರಿಗೆ ನೀಡಿ 700 ರೂ.ಗೆ ಒಂದು ಟನ್ ನೀಡಲಾಗುತ್ತದೆ. ಬ್ಲಾಕ್‍ನಲ್ಲಿ ಮರಳು ಮಾರುಕಟ್ಟೆಗೆ ಅವಕಾಶ ಮಾಡದಂತೆ ವ್ಯವಸ್ಥೆ ಮಾಡಲಾಗಿದೆ.
ಮರಳು ಮಿತ್ರ ಆ್ಯಪ್: ಹೊಸ ಮರಳು ನೀತಿಯ ಅನುಸಾರ ಮರಳು ಮಿತ್ರ ಆ್ಯಪ್ ಅಳವಡಿಸಲಾಗಿದ್ದು, ಈ ಆ್ಯಪ್‍ನ್ನು ಮೊಬೈನ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಅದರಲ್ಲಿ ಮರಳು ಸ್ಟಾಕ್ ಇರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಅದರಂತೆ ಬೇಡಿಕೆಗೆ ಅನುಕೂಲವಾಗುತ್ತದೆ. ನಗದು ಪಾವತಿ ಮಾಡಿದ ತಕ್ಷಣ ಗ್ರಾಹಕರು ಹೇಳಿದ ಸ್ಥಳಕ್ಕೆ ಮರಳು ಸರಬರಾಜು ಮಾಡಲಾಗುತ್ತದೆ.
ಸಾಗಾಣಿಕೆ ವೆಚ್ಚ ಮಾತ್ರ ಪಾವತಿ ಮಾಡಿದರೆ ಮರಳು ತಲುಪುತ್ತದೆ. ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿರುತ್ತದೆ. ಪರ್ಮಿಟ್ ಲಿಂಕ್ ಆಗಿರುತ್ತದೆ. ಜಿಯೋ ಟ್ಯಾಗಿಂಗ್, ಜಿಯೋ ಪೆಂಗ್ವಿನ್ ಇರುತ್ತದೆ. ಈ ಮೂಲಕ ಅಕ್ರಮಕ್ಕೆ ಕಡಿವಾಣ ಬೀಳುತ್ತದೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು.
