ಪಾಕ್ ಸಂಸತ್‍ಗೆ ಸಾರ್ವತ್ರಿಕ ಚುನಾವಣೆ ಘೋಷಣೆಗೆ ಒತ್ತಾಯ

Social Share

ಲಾಹೋರ್, ಜು.18- ಪಂಜಾಬ್ ವಿಧಾನಸಭಾ ಉಪಚುನಾವಣೆಯಲ್ಲಿ ತಮ್ಮ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ ವಿಜಯ ದಾಖಲಿಸಿದ ನಂತರ ಉತ್ತೇಜನ ಪಡೆದಿರುವ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ, ಪಾಕಿಸ್ತಾನದ ಸಂಸತ್‍ಗೆ ಹೊಸದಾಗಿ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಕೆಲವು ಕ್ಷೇತ್ರಗಳಿಗೆ ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ಉಪಚುನಾವಣೆ ನಡೆದಿತ್ತು. ಅದರಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ 16 ಸ್ಥಾನಗಳನ್ನು ಗೆದ್ದಿದೆ. ಪ್ರಧಾನಿ ಶಹಬಾಜ್ ಷರೀಫ್ ಅವರ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮೂರು ಸ್ಥಾನಗಳನ್ನು ಗೆದ್ದಿದೆ.

ಪಕ್ಷೇತರರು ಗೆಲವು ಸಾಧಿಸಿದ್ದಾರೆ. ಈ ಮೂಲಕ ತವರು ನಾಡಿನಲ್ಲಿ ಪ್ರಧಾನಿ ಅವರಿಗೆ ಹಿನ್ನೆಡೆಯಾಗಿದೆ. ಪಂಜಾಬ್ ಪ್ರಾಂತ್ಯಕ್ಕೆ ಶೆಹಬಾಜ್ ಶರೀಫ್ ಅವರ ಪುತ್ರ ಹಮ್ಜಾ ಶೆಹಬಾಜ್ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಯಾಗಿದ್ದರು. ಉಪಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸಿದ ಕಾರಣಕ್ಕೆ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಿದ್ದಾರೆ.

ಜುಲೈ 22ರಂದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಗೆ ಚುನಾವಣೆ ನಡೆಯಲಿದೆ. ಸದ್ಯದ ಫಲಿತಾಂಶದ ಪ್ರಕಾರ ಪಿಟಿಐ-ಪಿಎಂಎಲ್-ಎನ್ ಮಿತ್ರಕೂಟದ ಅಭ್ಯರ್ಥಿ ಚೌದರಿ ಪವೇಜ್ ಇಲಿಯಾಸ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ಫಲಿತಾಂಶ ಅಕೃತವಾಗಿ ಪ್ರಕಟಗೊಳ್ಳುವ ಮುನ್ನವೇ ಟ್ವಿಟ್ ಮಾಡಿರುವ ಇಮ್ರಾನ್ ಖಾನ್ ಪಾಕ್ ಸಂಸತ್‍ಗೂ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಡಿಸೆಂಬರ್‍ನಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ಇಮ್ರಾನ್ ಖಾನ್ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಸಲಾಗದೆ ಸೋಲು ಕಂಡು ಪ್ರಧಾನಿ ಸ್ಥಾನ ಕಳೆದುಕೊಂಡರು.

Articles You Might Like

Share This Article