ಗೋಡೆ ಹಾರಿ ನೆರೆಮನೆಯಲ್ಲಿ ತಲೆಮರೆಸಿಕೊಂಡಿದ್ದ ಇಮ್ರಾನ್‍ ಖಾನ್

Social Share

ಇಸ್ಲಾಮಾಬಾದ್,ಮಾ.7- ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಮನೆಯ ಗೋಡೆ ಹಾರಿ ನೆರೆಮನೆಗೆ ಪರಾರಿಯಾಗಿದ್ದರಿಂದ ಅವರನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನ ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರು ಹೇಳಿದ್ದಾರೆ.

ಇಮ್ರಾನ್ ಖಾನ್ ಅವರನ್ನು ಬಂಧಿಸಲು ಇಸ್ಲಾಮಾಬಾದ್ ಪೊಲೀಸರು ಲಾಹೋರ್‍ಗೆ ಆಗಮಿಸಿದ್ದು, ಇಮ್ರಾನ್ ಖಾನ್ ತಲೆಮರೆಸಿಕೊಂಡಿರುವುದರಿಂದ ಅವರ ಬಂಧನ ನಿನ್ನೆ, ಖಾನ್ ಅವರನ್ನು ಬಂಧಿಸಲು ಹೋದ ತಂಡವು ಸಾಕಷ್ಟು ನಾಟಕವನ್ನು ಎದುರಿಸಿತು. ಖಾನ್ ತನ್ನ ನೆರೆಹೊರೆಯವರ ಮನೆಯಲ್ಲಿ ತಲೆಮರೆಸಿಕೊಂಡರು ಎಂದು ಅವರು ತಿಳಿಸಿದ್ದಾರೆ.

ತಲೆಮರೆಸಿಕೊಂಡ ಶಾಸಕ ಮಾಡಾಳ್ ಬಂಧನಕ್ಕೆ ಲೋಕಾಯುಕ್ತ ವ್ಯಾಪಕ ಶೋಧ

ತಲೆಮರೆಸಿಕೊಂಡಿರುವ ಖಾನ್ ಅವರಿಗೆ ನೋಟೀಸ್ ಜಾರಿ ಮಾಡಲು ಪೊಲೀಸರು ಅಲ್ಲಿಗೆ ತೆರಳಿದ್ದರು ಆದರೆ, ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಖಾನ್ ಅವರು ಇದೀಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸನಾವುಲ್ಲಾ ವಾಗ್ದಾಳಿ ನಡೆಸಿದ್ದಾರೆ.

ನ್ಯಾಯಾಲಯವು ಇಮ್ರಾನ್ ಖಾನ್ ಅವರನ್ನು ಖುಲಾಸೆಗೊಳಿಸಿದರೆ, ನಾವು ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಸನಾವುಲ್ಲಾ ಹೇಳಿದರು, ಅವರನ್ನು ಬಂಧಿಸಲು ಸರ್ಕಾರಕ್ಕೆ ಯಾವುದೇ ಇಚ್ಛೆ ಇಲ್ಲ, ಆದರೆ ಅವರು ನ್ಯಾಯಾಲಯದ ಮುಂದೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಕಳೆದ ಫೆಬ್ರವರಿ 28 ರಂದು ಹೆಚ್ಚುವರಿ ಸೆಷನ್ಸ ನ್ಯಾಯಾೀಧಿಶ ಜಾಫರ್ ಇಕ್ಬಾಲ್ ಅವರು ತೋಷಖಾನಾ ಪ್ರಕರಣದಲ್ಲಿ ನಿರಂತರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣಕ್ಕಾಗಿ ಇಮ್ರಾನ್ ಖಾನ್ ಅವರಿಗೆ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದರು.

ಏತನ್ಮಧ್ಯೆ, ಇಸ್ಲಾಮಾಬಾದ್‍ನ ಸ್ಥಳೀಯ ನ್ಯಾಯಾಲಯವು ತೋಷಖಾನಾ ಪ್ರಕರಣದಲ್ಲಿ ತನ್ನ ಬಂಧನ ವಾರಂಟ್ ಅನ್ನು ಅಮಾನತುಗೊಳಿಸುವಂತೆ ಕೋರಿ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಮಾಡಿದ ಮನವಿಯನ್ನು ತಿರಸ್ಕರಿಸಿತು.

ಟಿಪ್ಪು ಮೈಸೂರು ಹುಲಿ ಅಲ್ಲ, ಸಂಚುಕೋರ, ಮೋಸಗಾರ : ಸಿ.ಟಿ.ರವಿ

ನ್ಯಾಯಾಲಯದ ಆದೇಶದ ಪ್ರಕಾರ, ಭಾನುವಾರದಂದು ಇಸ್ಲಾಮಾಬಾದ್ ಪೊಲೀಸ್ ತಂಡ, ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬಂಧನ ವಾರಂಟ್ ಜಾರಿಗೊಳಿಸಲು ಜಮಾನ್ ಪಾರ್ಕ್‍ಗೆ ಭೇಟಿ ನೀಡಿತು. ಆದರೆ, ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.

ಪಾಕಿಸ್ತಾನದ ಮಾಜಿ ಪ್ರಧಾನಿ ಕೂಡ ಪ್ರಕರಣದಲ್ಲಿ ಬಂಧನದ ನಂತರ ಜಾಮೀನು ಕೋರಿ ಸೋಮವಾರ ಲಾಹೋರ್ ಹೈಕೋರ್ಟ್‍ಗೆ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಖಾನ್ ಪರ ವಕೀಲರಾದ ಅಲಿ ಬುಖಾರಿ, ಖೈಸರ್ ಇಮಾಮ್ ಮತ್ತು ಗೋಹರ್ ಅಲಿ ಖಾನ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.

Imran Khan, Jumped, Wall, Escaped, Neighbour, House ,

Articles You Might Like

Share This Article