ಪಾಕಿಸ್ತಾನದಲ್ಲಿ ಇಮ್ರಾನ್‍ಖಾನ್ ಪಕ್ಷವನ್ನೇ ನಿಷೇಧಿಸಲು ಚರ್ಚೆ

Social Share

ಇಸ್ಲಾಮಾಬಾದ್,ಮಾ.19- ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಮನೆಯಲ್ಲಿ ಕೆಲವು ಶಸ್ತ್ರಾಸ್ತ್ರಾಗಳು ಪತ್ತೆಯಾದ ಬೆನ್ನಲ್ಲೆ ಅವರ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ ಪಕ್ಷವನ್ನು ನಿಷೇಧಿತ ಸಂಘಟನೆಯ ಪಟ್ಟಿಗೆ ಸೇರಿಸಲು ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನುವುಲ್ಲಾ ಹೇಳಿದ್ದಾರೆ.

ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರಾಗಲು ಇಮ್ರಾನ್ ಖಾನ್ ಲಾಹೋರ್‍ನಿಂದ ಇಸ್ಲಾಮಾಬಾದ್‍ಗೆ ಪ್ರಯಾಣಿಸಿದ ವೇಳೆ ಅವರ ಬೆಂಬಲಿಗರು ಪೊಲೀಸರೊಂದಿಗೆ ಸಂಘರ್ಷ ನಡೆಸಿದರು.

ಈ ವೇಳೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದಾಗ ಲಾಹೋರ್‍ನಲ್ಲಿರುವ ಇಮ್ರಾನ್ ಖಾನ್ ನಿವಾಸದಿಂದ ಪೆಟ್ರೋಲ ಬಾಂಬ್‍ಗಳು, ಅಕ್ರಮ ಶಸ್ತ್ರಾಸ್ತ್ರಾಗಳು ಪತ್ತೆಯಾಗಿದ್ದವು. ಗಲಭೆಯನ್ನು ಹತ್ತಿಕ್ಕಲು 10 ಸಾವಿರ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು. ಕಾರ್ಯಾಚರಣೆಯ ನಂತರ 12ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಭಾರತ-ಬಾಂಗ್ಲಾ ನಡುವೆ ರೈಲ್ವೆ ಮಾರ್ಗ ಕಾಮಗಾರಿ ಚುರುಕುಗೊಳಿಸಲು ಕ್ರಮ

ಇದೇ ಗಲಭೆಯನ್ನು ಆಧಾರವಾಗಿಟ್ಟುಕೊಂಡು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವನ್ನು ನಿಷೇಧಿತ ಗುಂಪು ಎಂದು ಘೋಷಿಸಲು ಪ್ರಕ್ರಿಯೆಯನ್ನು ಪ್ರಾರಂಭಿಸುವ ಕುರಿತು ಚರ್ಚಿಸಲಾಗುತ್ತಿದೆ.

ಇಮ್ರಾನ್ ಖಾನ್ ಅವರ ನಿವಾಸದಿಂದ ಶಸ್ತ್ರಾಸ್ತ್ರಗಳು, ಪೆಟ್ರೋಲ್ ಬಾಂಬ್‍ಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಭಯೋತ್ಪಾದಕರು ಜಮಾನ್ ಪಾರ್ಕ್‍ನ ಅವರ ನಿವಾಸದಲ್ಲಿ ಅಡಗಿಕೊಂಡಿದ್ದರು. ಇದು ಉಗ್ರಗಾಮಿ ಸಂಘಟನೆ ಎಂದು ಪ್ರಕರಣ ದಾಖಲಿಸಲು ಸಾಕಷ್ಟು ಪುರಾವೆಯಾಗಿದೆ ಎಂದು ಸನಾವುಲ್ಲಾ ಹೇಳಿದ್ದಾರೆ.

ಕಾವೇರಿದ ಚುನಾವಣೆ : ವಲಸೆ ತಡೆಯಲು ನಾಯಕರ ಹೆಣಗಾಟ

ಖಾನ್ ಅವರ ಪಕ್ಷವನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಯಾವುದೇ ಪಕ್ಷವನ್ನು ನಿಷೇಸುವುದು ನ್ಯಾಯಾಂಗ ಪ್ರಕ್ರಿಯೆಯಾಗಿದೆ. ಈ ವಿಷಯದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

Imran Khan, party, banned, Pakistan,

Articles You Might Like

Share This Article