ಶಾಕಿಂಗ್ : ಜಮ್ಮುನಲ್ಲಿ ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರ ಕತ್ತು ಕೂಯ್ದು ಕೊಲೆ..!

Social Share

ಜಮ್ಮು, ಅ. 4- ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಕಾರಾಗೃಹ) ಹೇಮಂತ್ ಕೆ ಲೋಹಿಯಾ ಅವರು ಇಲ್ಲಿನ ಅವರ ನಿವಾಸದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಕಳೆದ ರಾತ್ರಿ ಕಾಶ್ಮೀರ ರಾಜ್ಯದ 1992ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಹೇಮಂತ್ ಅವರನ್ನು ಕತ್ತು ಕೂಯ್ದು ಕೊಲೆ ಮಾಡಿ ನಂತರ ಮೃತದೇಹದಲ್ಲಿ ಸುಟ್ಟ ಹಾಕಲು ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ.

ಹೊರವಲಯದಲ್ಲಿರುವ ಉದಯವಾಲಾದಲ್ಲಿರುವ ಲೋಹಿಯಾ ಅವರ ಮನೆಗೆ ಭೇಟಿ ನೀಡಿದ ಪೊಲೀಸರು ತನಿಖೆ ನಡೆಸುತ್ತಿದ್ದು ಮನೆಕೆಲಸ ಮಾಡುತ್ತಿದ್ದ ಜಾಸಿರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು ಪ್ರಸ್ತುತ ತಲೆಮರೆಸಿಕೊಂಡಿರುವ ಆತನ ಸೆರೆಗೆ ಬಲೆ ಬೀಸಲಾಗಿದೆ.

ಕಳೆದ ಆಗಸ್ಟ್‍ನಲ್ಲಿ ಕಾರಾಗೃಹ ವಿಭಾಗದ ಮಹಾನಿರ್ದೇಶಕರಾಗಿ ಬಡ್ತಿ ಪಡೆದು ನೇಮಕಗೊಂಡ 57 ವರ್ಷದ ಲೋಹಿಯಾ ದುರಾದೃಷ್ಟಕರ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ತಿಳಿಸಿದ್ದಾರೆ.

ಕೊಲೆಗಾರ ಮೊದಲು ಉಸಿರುಗಟ್ಟಿಸಿ ಕೊಲೆ ಮಡಲು ಪ್ರಯತ್ನಿಸಿದ್ದು ಮಂತರ ಮುರಿದ ಬಾಟಲಿಯನ್ನು ಬಳಸಿ ಅವನ ಕತ್ತು ಸೀಳಲಾಗಿದೆ ಮತ್ತು ನಂತರ ದೇಹಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಅಧಿಕಾರಿಯ ನಿವಾಸದಲ್ಲಿ ಹಾಜರಿದ್ದ ಕಾವಲುಗಾರದನ್ನು ಕೂಡಿಹಾಕಲಾಗಿತ್ತು ಎಂದು ತಿಳಿದುಬಂದಿದೆ. ಘಟನೆ ಹಿಂದೆ ಉಗ್ರರ ಕೈವಾಡವಿರುವ ಸಾಧ್ಯತೆ ಇದೆ. ಗೃಹ ಸಚಿವ ಅಮಿತ್ ಶಾ ಕಣಿವೆ ರಾಜ್ಯಕ್ಕೆ ಭೇಟಿ ನೀಡುವ ನಡುವೆಯೇ ಈ ದುರಂತ ನಡೆದಿದ್ದು ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ.

Articles You Might Like

Share This Article