ರಿಯಲ್ ಎಸ್ಟೇಟ್ ಉದ್ಯಮಿಗಳ 1,300 ಕೋಟಿ ಅಕ್ರಮ ಸಂಪತ್ತು ಪತ್ತೆ

Social Share

ಬೆಂಗಳೂರು,ನ.18- ಕರ್ನಾಟಕ ಮೂಲದ ರಿಯಲ್ ಎಸ್ಟೇಟ್ ಡೆವಲಪರ್‍ಗಳೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ಮಾಡಿಕೊಂಡಿರುವ ಕೆಲವು ವ್ಯಕ್ತಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯು ಶೋಧ ನಡೆಸಿದ್ದು, 1,300 ಕೋಟಿಗೂ ಹೆಚ್ಚು ಮೌಲ್ಯದ ಲೆಕ್ಕವಿಲ್ಲದ ಕಪ್ಪು ಹಣ ಪತ್ತೆ ಮಾಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಅಕ್ಟೋಬರ್ 20 ಮತ್ತು ನವೆಂಬರ್ 2ರಂದು ಬೆಂಗಳೂರು, ಮುಂಬೈ ಹಾಗೂ ಗೋವಾದಲ್ಲಿ ಸುಮಾರು 50 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಗಿತ್ತು. ಅ.20ರಿಂದ ಇದುವರೆಗೆ ನಡೆದ ಶೋಧ ಕಾರ್ಯಗಳಲ್ಲಿ ಬರೋಬ್ಬರಿ 1,300 ಕೋಟಿ ರೂ.ಗೂ ಹೆಚ್ಚು ಲೆಕ್ಕವಿಲ್ಲದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಿದೆ.

ಇದಲ್ಲದೆ 24 ಕೋಟಿಗೂ ಅಧಿಕ ಮೌಲ್ಯದ ನಗದು ಮತ್ತು ಚಿನ್ನಾಭರಣಗಳ ಸ್ವರೂಪದ ಅಘೋಷಿತ ಆಸ್ತಿಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ.

ನಕಲಿ ಮತದಾರರನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗಿದೆ : ಬಿಬಿಎಂಪಿ ವಿಶೇಷ ಆಯುಕ್ತ

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ತೆರಿಗೆ ಇಲಾಖೆಗೆ ನೀತಿ ನಿಯಮಗಳನ್ನು ರೂಪಿಸುತ್ತದೆ. ಸಿಬಿಡಿಟಿಯು ಮಾರಾಟ ಒಪ್ಪಂದಗಳು, ಅಭಿವೃದ್ಧಿ ಒಪ್ಪಂದಗಳು ಮತ್ತು ಆಕ್ಯುಪೆನ್ಸಿ ಪ್ರಮಾಣಪತ್ರಗಳಿಗೆ (ಒಸಿ) ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿ ಕೊಂಡಿ ರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

ಅಧಿಕಾರಿಗಳಿಂದ ಆಕ್ಯುಪೆನ್ಸಿ ಪ್ರಮಾಣ ಪತ್ರಗಳನ್ನು ನೀಡಿದ ನಂತರವೂ ಭೂಮಾಲೀಕರು ಜೆಡಿಎಗಳ (ಜಂಟಿ ಅಭಿವೃದ್ಧಿ ಒಪ್ಪಂದಗಳು) ಮೂಲಕ ವಿವಿಧ ಡೆವಲಪರ್‍ಗಳಿಗೆ ಅಭಿವೃದ್ಧಿಗೆ ನೀಡಿದ ಭೂಮಿಯನ್ನು ವರ್ಗಾಯಿಸಿದಾಗ ಬಂಡವಾಳ ಲಾಭದಿಂದ ಬಂದ ಆದಾಯವನ್ನು ಬಹಿರಂಗಪಡಿಸಿಲ್ಲವೆಂದು ಸಿಬಿಡಿಟಿ ಆರೋಪಿಸಿದೆ.

ಮತದಾರರ ಪಟ್ಟಿಯಿಂದ ಸಾವಿರಾರು ಮಂದಿಯ ಹೆಸರು ನಾಪತ್ತೆ : ಚಿಲುಮೆ ಕೈವಾಡ ಶಂಕೆ

ಕೆಲವು ಭೂಮಾಲೀಕರು ತಮ್ಮ ಆದಾಯ ತೆರಿಗೆ ರಿಟನ್ರ್ಸ್‍ಗಳನ್ನು ಹಲವಾರು ವರ್ಷಗಳಿಂದ ಸಲ್ಲಿಸಿಯೇ ಇಲ್ಲ. ಈ ಸಮಯದಲ್ಲಿ ಬಂಡವಾಳ ಲಾಭದ ಆದಾಯವು ರಿಯಲ್ ಎಸ್ಟೇಟ್ ಡೆವಲಪರ್ಸ್‍ಗಳಿಗೆ ಸೇರಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹೇಳಿದೆ.

Income Tax, dept, detects, Rs 1300 cr, black, income, raids, Karnataka, realty, sector,

Articles You Might Like

Share This Article