ಬೆಂಗಳೂರು,ಡಿ.9-ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆ ಬೆಂಗಳೂರು ನಗರ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿ ದಾಖಲಾತಿಗಳನ್ನು ವಶಪಡಿಸಿಕೊಂಡಿದೆ.
ಬೆಂಗಳೂರಿನ ಸಂಜಯ್‍ನಗರ, ಹೆಬ್ಬಾಳ, ಕೊಡುಗೆಹಳ್ಳಿ, ಬಿಡದಿ, ಚಿಕ್ಕಬಳ್ಳಾಪುರ, ರಾಮನಗರಗಳಲ್ಲಿ ಕಾರ್ಯಾಚರಣೆ ನಡೆಸಿರುವ ವಿಶೇಷ ತಂಡಗಳು ಬೆಳಗ್ಗೆಯಿಂದಲೇ ದಾಖಲಾತಿಗಳನ್ನು ಪರಿಶೀಲನೆ ಮಾಡಿವೆ.
ಕಂಪೆನಿಗಳ ವ್ಯವಹಾರಗಳು ಅನುಮಾನ್ಪದವಾಗಿದ್ದು, ಕೆಲವು ವ್ಯವಹಾರಗಳನ್ನು ನಕಲಿ ದಾಖಲಾತಿಗಳ ಮೇಲೆ ನಿರ್ವಹಿಸಲಾಗಿದೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಮಾಹಿತಿ ಸಂಗ್ರಹಿಸಿದ ಆದಾಯ ತೆರಿಗೆ ಅಧಿಕಾರಿಗಳು ನಿನ್ನೆ ರಾತ್ರಿಯಿಂದಲೇ ಸಿದ್ಧತೆ ಕೈಗೊಂಡು ಬೆಳಗ್ಗೆ ದಾಳಿ ನಡೆಸಿದ್ದಾರೆ.
ಸಂಸತ್‍ನಲ್ಲಿ ಏಕರೂಪ ನಾಗರೀಕತೆ ಮಸೂದೆ ಪ್ರಸ್ತಾಪ ನಿರೀಕ್ಷೆ
ಈ ವೇಳೆ ನಗದು ಹಾಗೂ ಪ್ರಮುಖ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
income tax, raid, bangalore,