ಬ್ರೇಕಿಂಗ್ : ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

Social Share

ನವದೆಹಲಿ ,ಜ.9- ಹಿರಿಯ ನಾಗರಿಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿರುವ ಕೇಂದ್ರ ಹಣಕಾಸು ಸಚಿವಾಲಯ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಆದಾಯ ತೆರಿಗೆ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದೆ.

2023ರ ಬಜೆಟ್‍ಗೂ ಮುನ್ನ ಆದಾಯ ತೆರಿಗೆಯಲ್ಲಿನ ಪರಿಹಾರದ ಕುರಿತು ಚರ್ಚೆಗಳು ನಡೆಯುತ್ತಿದ್ದು ಈ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಿರಿಯ ನಾಗರೀಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ತಮ್ಮ ಆದಾಯದ ಮೂಲವಾಗಿ ಪಿಂಚಣಿ ಮತ್ತು ಬ್ಯಾಂಕ್ ಬಡ್ಡಿಯನ್ನು ಮಾತ್ರ ಹೊಂದಿರುವವರು ಇದಕ್ಕೆ ಅರ್ಹರಾಗಿದ್ದಾರೆ ಇಂತಹವರು ಜೀವನ ನಿರ್ವಹಣೆಗೆ ಅವಲಂಬಿತರಾಗಿರುವುದನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ.

ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಸೆರೆ

ಉದ್ಯೋಗಸ್ಥರು ಆದಾಯ ತೆರಿಗೆ ಸ್ಲ್ಯಾಬ್‍ನಲ್ಲಿ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮುನ್ನವೇ ಹಿರಿಯ ನಾಗರಿಕರ ಪಾಲಿಗೆ ಸಿಹಿಸುದ್ದಿ ಪ್ರಕಟವಾಗಿದೆ. ಫೆಬ್ರವರಿ 1 ರಂದು ವರ್ಷ 2023ರ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಹಲವು ರಿಯಾಯಿತಿ ಜೊತೆಗೆ ಹಲವು ಉತ್ಪನ್ನಗಳ ಮೇಲೆ ವಿಧಿಸಿರುವ ದುಭಾರಿ ಜಿಎಸ್‍ಟಿ ಕಡಿತವಾಗಬಹುದು.

Income Tax, relief, Senior Citizens, Budget 2023,

Articles You Might Like

Share This Article