ಪ.ಜಾ, ಪ.ಪಂ ಮೀಸಲಾತಿ ಹೆಚ್ಚಳ ಒಂದು ಐತಿಹಾಸಿಕ ನಿರ್ಧಾರ : ಸಿಎಂ

Social Share

ಬೆಂಗಳೂರು,ಫೆ.24- ಅನೇಕ ಸವಾಲುಗಳ ನಡುವೆಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದು ಒಂದು ಐತಿಹಾಸಿಕ ನಿರ್ಧಾರ. ಬರುವ ದಿನಗಳಲ್ಲಿ ಇದರ ಲಾಭ ಆ ಸಮುದಾಯಕ್ಕೆ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

15ನೇ ವಿಧಾನಸಭೆಯ ಕೊನೆಯ ದಿನವಾದ ಹಿನ್ನಲೆಯಲ್ಲಿ ಮಾತನಾಡಿದ ಬೊಮ್ಮಾಯಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದು ಐತಿಹಾಸಿಕ ನಿರ್ಣಯ. ಇದಕ್ಕಾಗಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಮುಂದೊಂದು ದಿನ ಬೇರೆ ರಾಜ್ಯಗಳು ಇದನ್ನು ಅನುಕರಣೆ ಮಾಡಲಿವೆ ಎಂದು ಹೇಳಿದರು.

15 ನೇ ವಿಧಾನಸಭೆ 5 ವರ್ಷ ಕಾಲಘಟ್ಟದಲ್ಲಿ ಎರಡಮೂರು ವಿಚಾರಗಳನ್ನು ನಮ್ಮನ್ನು ಗಟ್ಟಿಗೊಳಿಸುತ್ತಾ ಹೋಗಿವೆ. ಈ ಐದು ವರ್ಷಗಳಲ್ಲಿ ನಾವು ಎಂದೂ ಕಾಣದ ದಿನಗಳನ್ನು ನೋಡಿದ್ದೇವೆ. ಕೋವಿಡ್ ಕಾಲದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದೆವು, ಸದನದಲ್ಲಿ ಗ್ಲಾಸ್ ಹಾಕಿ ಕಲಾಪ ನಡೆಸಲಾಯಿತು. ಇದು ಮರೆಯಲಾರದ ದಿನ ಎಂದರು.

ಭಯದ ವಾತಾವರಣವಿದ್ದಾಗ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ವೈದ್ಯರು, ಹಲವು ತಜ್ಞರು… ವಿಜ್ಞಾನಿಗಳು ಕೋವಿಡ್‍ಗಾಗಿಲಸಿಕೆ ಕಂಡುಹಿಡಿದು ಸಕಾಲಕ್ಕೆ ಕೊಟ್ಟಿದ್ದು ಅಮೃತ ಘಳಿಗೆ ಎಂದು ಹೇಳಿದರು.
ಈ ಐದು ವರ್ಷ ನಮಗೆ ಕೋವಿಡ್ ಸಾಕಷ್ಟು ಅನುಭವ ನೀಡಿದೆ. ಒಂದು ಕಡೆ ಸತತ ಪ್ರವಾಹ, ಮತ್ತೊಂದು ಕಡೆ ಕೋವಿಡ್ ಮಾರಿ ಎದುರಾದವು ಆದರೂ ದೃತಿಗೆಡದೆ ಪರಿಸ್ಥಿತಿಯನ್ನು ನಿಭಾಯಿಸಿದ್ದೇವೆ. ಆರ್ಥಿಕ ಬೆಳವಣಿಗೆಯು ಉತ್ತಮವಾಗಿದೆ ಎಂದರು.

ಒಂದು ದೇಶ ಸ್ವಾತಂತ್ರ ಪಡೆಯುವುದು ಸುಲಭವಲ್ಲ ಮತ್ತು ನಂತರ ಅಭಿವೃದ್ಧಿಯಾಗುವುದು ಕೂಡ ಸುಲಭವಲ್ಲ. ಅಂಬೇಡ್ಕರ್, ಗಾಂೀಜಿ, ಮೊದಲ ಪ್ರಧಾನಿ ದೂರ ದೃಷ್ಟಿಯಿಂದ ಭಾರತಕ್ಕೆ ಒಂದು ಅಡಿಪಾಯ ಹಾಕಿದ್ದಾರೆ. ಅದರಲ್ಲೂ ಅಂಬೇಡ್ಕರ್ ಕೊಡುಗೆ ಸಾಕಷ್ಟು ಕೊಟ್ಟಿದ್ದಾರೆ ಎಂದು ಸ್ಮರಿಸಿದರು.

ಸಂವಿಧಾನ ಮೂಲಕ ದೇಶ ಅಭಿವೃದ್ಧಿ ಕಾರಣವಾಗಿದೆ. ಅದೇ ರೀತಿ ಕರ್ನಾಟಕ ಏಕೀಕರಣಕ್ಕೆ ಸಾಕಷ್ಟು ಜನ ಕೊಡುಗೆ ಕೊಟ್ಟಿದ್ದಾರೆ. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಕೊಡುಗೆ ಕೂಡ ಜÁಸ್ತಿ ಇದೆ ಎಂದು ಮೆಲುಕು ಹಾಕಿದರು.

ಹದಿನೈದನೆಯ ವಿಧಾನಸಭೆ ಬಹಳ ಯಶಸ್ವಿಯಾಗಿ ನಡೆಯಲು ಸಭಾಧ್ಯಕ್ಷರೂ ಕಾರಣ. ವಿರೋಧ ಪಕ್ಷದವರು ಸಹಾ ಬಹಳ ಸಹಕಾರ ಕೊಟ್ಟಿದ್ದಾರೆ. ಕೆಲವರು ಹೊಸದಾಗಿ ಈ ಸದನಕ್ಕೆ ಬಂದವರು ಇಂದು ನಾಯಕರಾಗಿ, ಅನುಭವಸ್ಥ ರಾಗಿ ಹೊರ ಹೊಮ್ಮಿದ್ದಾರೆ. ಕುಮಾರ ಬಂಗಾರಪ್ಪ, ರಾಜೀವ್ ಬಹಳ ಗಮನ ಸೆಳೆದಿದ್ದಾರೆ.

ಕುಮಾರಸ್ವಾಮಿ ಅವರು ಬಡವರ ಪರ ಸಾಕಷ್ಟು ದನಿಯೆತ್ತಿದ್ದಾರೆ. ಯತ್ನಾಳ್ ಅವರು ನಿರ್ಭಯವಾಗಿ ಪರ, ವಿರೋಧ ಎಲ್ಲಾ ಮಾತಾಡ್ತಾರೆ. ಅವರಿಗೆ ಯಾವ ಭಯವೂ ಇಲ್ಲ ಯಡಿಯೂರಪ್ಪ ಅವರ ಅಪಾರ ಅನುಭವ, ಹೋರಾಟ ಹಿನ್ನಲೆಯಿಂದ ಬಂದವರು ಶಿಕಾರಿಪುರ ದ ಮುನಿಸಿಪಲ್ ಮೆಂಬರ್ ಆಗಿ ಕೆಲಸ ಆರಂಭಿಸಿದರು.

ಜೀವನದ ಸತ್ಯ, ಸಿಹಿ ಕಹಿ ಎಲ್ಲಾ ಅವರಿಗೆ ಗೊತ್ತು ಎಲ್ಲರ ಜೊತೆ ಬೆರೆತು ಸರಿಸಮಾನವಾಗಿ ಇರ್ತಾರೆ. ಅವರ ಕೊಡುಗೆ ಬಹಳ ಇದೆ. ರೈತರಬಜೆಟ್ ಮಂಡಿಸಿದ್ದು ನೆನಪಿದೆ, ಬಡವರಿಗೆ, ರೈತರಿಗೆ ಬಹಳ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು.

#Increase, #SC/ST, #reservation, #Historic, #Decision, #CM,

Articles You Might Like

Share This Article