Saturday, September 23, 2023
Homeಇದೀಗ ಬಂದ ಸುದ್ದಿಅ.1ರಿಂದ ಸ್ಥಿರಾಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ

ಅ.1ರಿಂದ ಸ್ಥಿರಾಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ

- Advertisement -

ಬೆಂಗಳೂರು, ಸೆ.19- ರಾಜ್ಯದಲ್ಲಿ ಅಕ್ಟೋಬರ್ ಒಂದರಿಂದ ಸ್ಥಿರಾಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷ್ಕರಣೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಸುದ್ದಿಗೋಷ್ಠಿಯಲ್ಕಿ ಮಾತನಾಡಿದ ಅವರು, ಪ್ರತಿವರ್ಷ ಆಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷಕರಣೆ ಮಾಡಬೇಕ ಎಂಬ ನಿಯಮ ಇದೆ. ಆದರೂ ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳವಿದ್ದರೆ ಮಾರ್ಗಸೂಚಿ ದರ ಹೆಚ್ಚು ಆಗಲ್ಲ ಎಂದರು.

ಆದರೆ, ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಖಂಡಿತ ಹೆಚ್ಚಳ ಆಗಲಿದೆ.
ಹೆದ್ದಾರಿ, ವಿಮಾನನಿಲ್ದಾಣ, ಐಟಿ ಬಿಟಿ ಬಂದಿರೋ ಕಡೆಯೇ ಮಾರ್ಗಸೂಚಿ ದರ ಕಡಿಮೆ ಇದ್ದು, ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ. ಸರಾಸರಿ ಶೇ. 30 ರಷ್ಟು ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪಣೆ ಪರಿಶೀಲಿಸಿದ ಬಳಿಕ ಅಧಿಸೂಚನೆ ಪ್ರಕಟ ಆಗಲಿದೆ ಎಂದು ಅವರು ಹೇಳಿದರು.

- Advertisement -

BIG NEWS: ರಾಜ್ಯಾದ್ಯಾಂತ ಹುಕ್ಕಾಬಾರ್ ನಿಷೇಧಿಸಿಲು ರಾಜ್ಯ ಸರ್ಕಾರ ತೀರ್ಮಾನ

ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2000 ಕೋಟಿ ರೂ ಆದಾಯ ಬರಲಿದೆ. ಮಾರ್ಗಸೂಚಿ ದರ ಏರಿಕೆಯಿಂದ ಒಂದಷ್ಟು ವ್ಯತ್ಯಾಸ ಆಗಬಹುದು. ಅದು ಎರಡು ತಿಂಗಳ ಬಳಿಕ ಸರಿ ಆಗಲಿದೆ ಎಂದರು.
ಆಸ್ತಿ ಮಾರಾಟದ ವೇಳೆ ಬ್ಲ್ಯಾಕ್ ಮನಿ ಬಳಕೆ ಆಗುತ್ತಿದೆ. ಅದಕ್ಕೆ ಅವಕಾಶ ಕೊಡಬಾರದಲ್ಲವೇ? ಹೊಸದು ಮಾಡಿದಾಗ ಪರ -ವಿರೋಧ ಇರಲಿದೆ.

ಆದರೆ ಮಾರ್ಗಸೂಚಿ ದರ ಪ್ರತಿವರ್ಷ ಏರಿಕೆ ಮಾಡಬೇಕು ಎಂಬುದು ಕಾಯಿದೆಯಲ್ಲಿದೆ. ಕಳೆದ 5 ವರ್ಷದಿಂದ ಮಾರ್ಗಸೂಚಿ ದರ ಏರಿಕೆ ಆಗಿರಲಿಲ್ಲ. ಅದಕ್ಕೆ ನಾವು ಈಗ ಮಾಡುತ್ತಿದ್ದೇವೆ ಎಂದಯ ಕೃಷ್ಣ ಭೈರೇಗೌಡ ಸ್ಪಷ್ಟನೆ ನೀಡಿದರು.

Increase, #property, #registration, #rate, #minister, #krishnabyregowda,

- Advertisement -
RELATED ARTICLES
- Advertisment -

Most Popular