ನಾಗ್ಪುರ, ಫೆ. 9 – ಫಿಟ್ನೆಸ್ ಹೊಂದಿ ಟೀಮ್ ಇಂಡಿಯಾಕ್ಕೆ ಮರಳಿರುವ ವಿಶ್ವದ ನಂಬರ್ 1 ಅಲ್ ರೌಂಡರ್ ರವೀಂದ್ರಾ ಜಡೇಜಾ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಬೌಲಿಂಗ್ ಮಿಂಚು ಹರಿಸಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್ ಹಂತ ತಲುಪಲು ನಿರ್ಣಾಯಕವಾಗಿರುವ ಬಾರ್ಡರ್- ಗವಾಸ್ಕರ್ ಸರಣಿಯ ಮೊದಲ ಪಂದ್ಯವು ಇಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಅಂಗಣದಲ್ಲಿ ನಡೆಯುವ ಮೂಲಕ ಚಾಲನೆ ದೊರೆತಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯ ಕೈಗೊಂಡ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಪಡೆಗೆ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ (1)ರನ್ನು ಎಲ್‍ಬಿಡಬ್ಲ್ಯು ಮೂಲಕ ವಿಕೆಟ್ ಹಾರಿಸುವ ಮೂಲಕ ಹೊಡೆತ ನೀಡಿದರು. ನಂತರ ಮೊಹಮ್ಮದ್ ಶಮಿ ಕೂಡ ಡೇವಿಡ್ ವಾರ್ನರ್ (1)ರನ್ನು ಕ್ಲೀನ್ ಬೋಲ್ಡ್ ಮಾಡಿ ಆಘಾತ ನೀಡಿದರು. 2 ರನ್‍ಗಳಾಗುವಷ್ಟರಲ್ಲೇ ಆಸೀಸ್ ತಮ್ಮ ಆರಂಭಿಕ ಬ್ಯಾಟ್ಸ್‍ಮನ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.
ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಬಾರಿ ಪ್ರತಿಭಟನೆ
ಸರ್ ಮಿಂಚು:
3ನೇ ವಿಕೆಟ್‍ಗೆ ಜೊತೆಗೂಡಿದ ಉಪನಾಯಕ ಸ್ಟೀವ್ ಸ್ಮಿತ್ (37, 7 ಬೌಂಡರಿ) ಹಾಗೂ ಮಾರ್ನುಸ್ ಲಬುಸ್ಟಂಗ್ನೆ ( 49 ರನ್, 8 ಬೌಂಡರಿ) ಉತ್ತಮ ಜೊತೆಯಾಟ ನೀಡಿ 82 ರನ್‍ಗಳ ಕಾಣಿಕೆ ನೀಡಿ ಅಪಾಯಕಾರಿ ಆಗುವ ಲಕ್ಷಣ ತೋರಿದ್ದರು. ಆದರೆ ಈ ಜೋಡಿಯನ್ನು ಸರ್ ರವೀಂದ್ರಾ ಜಡೇಜಾ ಅವರು ತಮ್ಮ ಸ್ಪಿನ್ ಬಲೆಗೆ ಬೀಳಿಸಿಕೊಂಡಿದ್ದಲ್ಲದೆ, ಮ್ಯಾಟ್ ರನ್‍ಶಾರನ್ನು ಕೂಡ ಔಟ್ ಮಾಡುವ ಮೂಲಕ ಟೀಮ್ ಇಂಡಿಯಾಕ್ಕೆ ಮೇಲುಗೈ ತಂದುಕೊಟ್ಟರು.
ಆರ್.ಅಶೋಕ್ ಬದಲಿಗೆ ಮಂಡ್ಯ ಉಸ್ತುವಾರಿ ಹೊಣೆ ಗೋಪಾಲಯ್ಯ ಹೆಗಲಿಗೆ..?
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿತ್ತು. ಪೀಟರ್ ಹ್ಯಾಂಡ್ಸ್‍ಕೊಮ್ ( 20 ರನ್, 3 ಬೌಂಡಿ), ಅಲೆಕ್ಸ್ ಕ್ಯಾರಿ( 13 ರನ್, 6 ಬೌಂಡರಿ 2 ಸಿಕ್ಸರ್) ಕ್ರೀಸ್ ನಲ್ಲಿದ್ದರು.
ಇದಕ್ಕೂ ಮುನ್ನ ಟಾಸ್ ಸೋತು ಫೀಲ್ಡಿಂಗ್ ಮಾಡುವಂತಾದ ಭಾರತ ತಂಡದ ಪರ ಸೂರ್ಯಕುಮಾರ್ ಯಾದವ್ ಹಾಗೂ ಶಿಖರ್ ಭರತ್ ಪಾದಾರ್ಪಣೆ ಮಾಡಿದರು.
IND vs AUS, Comeback, Ravindra Jadeja, wicket,