ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಅಸಾಧ್ಯ : ರಮೀಜ್ ರಾಜಾ

Social Share

ನವದೆಹಲಿ, ಫೆ. 20- ತವರು ಅಂಗಳದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಭಾರತ ಬಲಿಷ್ಠವಾಗಿದ್ದು, ಆ ತಂಡವನ್ನು ಸೋಲಿಸುವುದು ಅತ್ಯಂತ ಕಠಿಣ ಕೆಲಸ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅವರು ಶ್ಲಾಘಿಸಿದ್ದಾರೆ.

ಐಸಿಸಿ ಆಯೋಜನೆಯ 2ನೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಗವಾಗಿ ನಡೆಯುತ್ತಿರುವ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಪಡೆ ಆಸ್ಟ್ರೇಲಿಯಾ ವಿರುದ್ಧ 2-0 ಯಿಂದ ಸರಣಿಯಲ್ಲಿ ಮುನ್ನಡೆ ಪಡೆದಿರುವ ಬೆನ್ನಲ್ಲೇ ಪಾಕ್ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಟೀಮ್ ಇಂಡಿಯಾ ಸಾಧನೆಯನ್ನು ಕೊಂಡಾಡಿದ್ದಾರೆ.

ಆಸ್ಟ್ರೇಲಿಯಾ ತಂಡವು ತಮ್ಮ ತವರು ನೆಲದ ಪರ್ತ್ ಹಾಗೂ ಬ್ರಿಸ್ಬೇನ್ ಪಿಚ್‍ಗಳಲ್ಲಿ ಉತ್ತಮ ಪ್ರದರ್ಶನ ತೋರಿ ಅಮೋಘ ಗೆಲುವು ಗಳಿಸುತ್ತಾರೆ, ಆದರೆ ಭಾರತದಲ್ಲಿ ಆ ತಂಡದ ಲೆಕ್ಕಾಚಾರಗಳೆಲ್ಲ ಉಲ್ಟಾ ಹೊಡೆದಿವೆ ಎಂದು ರಮೀಜ್ ತಿಳಿಸಿದರು.

ಗಂಡ ಮತ್ತುಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ ಮಹಿಳೆ

ಆಸ್ಟ್ರೇಲಿಯಾ ತಂಡವು 2 ಟೆಸ್ಟ್‍ಗಳಲ್ಲೂ 3 ದಿನಗಳಲ್ಲೇ ಸೋಲು ಕಂಡಿರುವುದನ್ನು ಗಮನಿಸಿದರೆ, ಆ ತಂಡವು ಭಾರತ ವಿರುದ್ಧ ಹೋರಾಟ ನಡೆಸಲು ಉತ್ತಮ ತರಬೇತಿ ನಡೆಸಿಲ್ಲ ಎಂದು ತೋರುತ್ತದೆ. ತವರಿನ ಅಂಗಳದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಅಸಾಧ್ಯದ ಮಾತು.

ಭಾರತ ತಂಡದ ಸ್ಪಿನ್ನರ್‍ಗಳ ವಿರುದ್ಧ ಆಸೀಸ್ ಬ್ಯಾಟರ್‍ಗಳು ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಒಂದೇ ಸೆಷನ್‍ನಲ್ಲಿ 9 ವಿಕೆಟ್‍ಗಳನ್ನು ಕಳೆದುಕೊಂಡಿ ರುವುದು ರವೀಂದ್ರ ಜಡೇಜಾ ಹಾಗೂ ಆರ್.ಅಶ್ವಿನ್ ಅವರ ಅಪ್ರತಿಮ ಸ್ಪಿನ್ ದಾಳಿಯನ್ನು ತೋರಿಸುತ್ತದೆ ಎಂದು ರಮೀಜ್ ರಾಜ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡವು ಪಾಕಿಸ್ತಾನವನ್ನು ಅದರ ನೆಲದಲ್ಲೇ 1-0ಯಿಂದ ಸರಣಿ ಜಯಿಸಿತ್ತು. ಶ್ರೀಲಂಕಾದಲ್ಲಿ 1-1ರಿಂದ ಸರಣಿ ಸಮಬಲಗೊಳಿಸಿತ್ತು. ಆದರೆ ಭಾರತ ತಂಡದಲ್ಲಿ 2-0ಯಿಂದ ಸರಣಿ ಹಿನ್ನೆಡೆ ಅನುಭವಿಸಿದ್ದು, ಸರಣಿ ಕೈಚೆಲ್ಲುವ ಅಪಾಯದಲ್ಲಿದೆ ಎಂದು ರಮೀಜ್ ಹೇಳಿದರು.

ಡಿಜಿಟಲ್ ಮೀಟರ್ ಅಳವಡಿಕೆಯಿಂದ ದುಪ್ಪಟ್ಟಾಯ್ತು ಕರೆಂಟ್ ಬಿಲ್..!

ಉತ್ತಮ ಬೌಲಿಂಗ್ ಸಂಯೋಜನೆ ಮಾಡುತ್ತಿರುವ ಅಶ್ವಿನ್ ಹಾಗೂ ಜಡೇಜಾ 2 ಟೆಸ್ಟ್ ಪಂದ್ಯಗಳಲ್ಲಿ 31 ವಿಕೆಟ್ ಕೆಡವಿ ಗಮನ ಸೆಳೆದಿದ್ದಾರೆ. ಬಾರ್ಡರ್- ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಸ್ಪಿನ್ನರ್‍ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಸ್ಪಿನ್ ಮೋಡಿ ಹಾಗೂ ನಾಯಕ ರೋಹಿತ್ ಶರ್ಮಾರ ಆಕರ್ಷಕ ಶತಕದ ನೆರವಿನಿಂದ ಇನಿಂಗ್ಸ್ ಹಾಗೂ 132 ರನ್‍ಗಳ ಗೆಲುವು ಸಾಸಿದ್ದ ಟೀಮ್ ಇಂಡಿಯಾ, ನವದೆಹಲಿಯಲ್ಲಿ ನಡೆದ ದ್ವಿತೀಯ ಟೆಸ್ಟ್‍ನಲ್ಲಿ ಆರ್.ಅಶ್ವಿನ್ ಹಾಗೂ ಆರ್.ಜಡೇಜಾ ಅವರ ಸ್ಪಿನ್ ಮೋಡಿಯಿಂದ 6 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ.

IND, AUS, Former, PCB, Chief Rameez Raja, ‘It is difficult, beat, India,

Articles You Might Like

Share This Article