ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಟೀಮ್ ಇಂಡಿಯಾ

Social Share

ಅಹಮದಾಬಾದ್, ಮಾ. 13- ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ 4 ನೇ ಪಂದ್ಯವು ಡ್ರಾ ಆಗಿದ್ದು, ಸರಣಿಯಲ್ಲಿ 2-1ಯಿಂದ ಮುನ್ನಡೆ ಪಡೆದಿರುವ ಟೀಮ್ ಇಂಡಿಯಾವು ಸರಣಿಯನ್ನು ಗೆದ್ದುಕೊಂಡಿದೆ.

ಐಸಿಸಿ ಆಯೋಜನೆಯ 2ನೇ ಟೆಸ್ಟ್ ಚಾಂಪಿಯನ್‍ಷಿಪ್‍ನ ಫೈನಲ್ ಹಂತಕ್ಕೆ ತಲುಪಲು ಈ ಭಾರತದ ಫಲಿತಾಂಶವು ನಿರ್ಣಾಯಕ ಆಗಿತ್ತಾದರೂ, ನ್ಯೂಜಿಲೆಂಡ್ ವಿರುದ್ಧ ಕ್ರಿಸ್ಟ್ ಚರ್ಚ್‍ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 2 ವಿಕೆಟ್‍ಗಳಿಂದ ವಿರೋಚಿತ ಸೋಲು ಕಂಡಿದ್ದರಿಂದ ಭಾರತ ತಂಡವು ಸತತ 2ನೇ ಬಾರಿಗೆ ಫೈನಲ್ ಹಂತಕ್ಕೇರಿದೆ.

4ನೇ ಟೆಸ್ಟ್‍ನ ದ್ವಿತೀಯ ಇನಿಂಗ್ಸ್‍ನಲ್ಲಿ 98 ರನ್‍ಗಳ ಹಿನ್ನಡೆ ಅನುಭವಿಸಿದ್ದ ಸ್ಟೀವನ್ ಸ್ಮಿತ್ ಪಡೆ 4ನೇ ದಿನದಾಟಕ್ಕೆ 3 ರನ್‍ಗಳಿಸಿತ್ತು. 5ನೇ ದಿನದಾಟ ಆರಂಭಿಸಿದ ನೈಟ್ ವಾಚ್‍ಮನ್ ಮ್ಯಾಥ್ಯೂ ಕುಹ್ನೇಮನ್ 1 ಬೌಂಡರಿ ಬಾರಿಸಿ 6 ರನ್ ಗಳಿಸಿದ್ದಾಗ ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಮೋಡಿಗೆ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು.

ಕಳ್ಳನೇ ಕಾವಲುಗಾರರನನ್ನು ದೂಷಿಸಿದಂತೆ : ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಆಸ್ಟ್ರೇಲಿಯಾಕ್ಕೆ ಟ್ರಾವಿಸ್ ಆಸರೆ:
ಕುಹ್ನೇಮನ್ ಔಟಾಗುತ್ತಿದ್ದಂತೆ ಕ್ರೀಸ್‍ಗಿಳಿದ ಮಾರ್ನುಸ್ ಲ್ಯಾಬುಶೇನ್ ಅವರು ಆರಂಭಿಕ ಆಟಗಾರ ಟ್ರಾವಿಸ್ ಹೆಡ್‍ರೊಂದಿಗೆ 2ನೆ ವಿಕೆಟ್‍ಗೆ 100 ರನ್‍ಗಳ ಜೊತೆಯಾಟ ನೀಡುವ ಮೂಲಕ ಮುನ್ನಡೆ ತಂದುಕೊಟ್ಟರು.
ತಾಳ್ಮೆಯ ಬ್ಯಾಟಿಂಗ್ ನಡೆಸಿದ ಟ್ರಾವಿಸ್ ಹೆಡ್ 112 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅರ್ಧಶತಕ ಗಳಿಸಿದರೆ, ಮಾರ್ನುಸ್ ಲ್ಯಾಬುಶೇನ್ ಕೂಡ ಅರ್ಧಶತಕ ಬಾರಿಸಿದರು.

ಕಳ್ಳನೇ ಕಾವಲುಗಾರರನನ್ನು ದೂಷಿಸಿದಂತೆ : ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಆಸ್ಟ್ರೇಲಿಯಾ 78.1 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದ್ದರು. ಟ್ರಾವಿಸ್ ಹೆಡ್ ( 90 ರನ್), ಲಾಬುಶೇನ್ (63*) ರನ್ ಗಳಿಸಿದ್ದರು.

IND, AUS, India, wins, series , 2-1 to retain, BorderGavaskar, trophy,

Articles You Might Like

Share This Article