75ನೇ ಶತಕ ಸಿಡಿಸಿ ಸಂಭ್ರಮಿಸಿದ ಕೊಹ್ಲಿ

Social Share

ಅಹಮದಾಬಾದ್, ಮಾ. 12- ವೈಟ್ ಬಾಲ್ ಸ್ವರೂಪದಲ್ಲಿ ಶತಕಗಳ ಮೇಲೆ ಶತಕ ಸಿಡಿಸಿದರೂ ರೆಡ್ ಬಾಲ್‍ನಲ್ಲಿ ಕಳೆದ 3 ವರ್ಷಗಳಿಂದ ಸೆಂಚುರಿ ಬರ ಎದುರಿಸಿದ್ದ ರನ್ ಮಿಷನ್ ಕಿಂಗ್ ಕೊಹ್ಲಿ , ಕೊನೆಗೂ ಭಗೀರಥ ಪ್ರಯತ್ನ ನಡೆಸಿ ಟೆಸ್ಟ್‍ನಲ್ಲಿ ಶತಕದ ಸಂಭ್ರಮ ಕಂಡಿದ್ದಾರೆ.

ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಆರಂಭಿಕ 3 ಪಂದ್ಯಗಳಲ್ಲೂ ಆಸ್ಟ್ರೇಲಿಯಾದ ಸ್ಪಿನ್ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದ್ದ ವಿರಾಟ್ ಕೊಹ್ಲಿ, ಆಸೀಸ್‍ನ ಖ್ಯಾತ ಸ್ಪಿನ್ನರ್ ನೇಥನ್ ಲಾಯನ್ ಅವರ ಚಂಡನ್ನು ಮಿಡ್ಲಾಫ್ ಕಡೆಗೆ ತಳ್ಳುವ ಮೂಲಕ ಒಂದು ರನ್ ಗಳಿಸಿ ಶತಕ ಸಿಡಿಸಿ ಟೀಕಾಕಾರರಿಗೆ ತಮ್ಮ ಬ್ಯಾಟಿಂಗ್ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ.

ಸಿರಿಯಾ ಮೇಲೆ ಇಸ್ರೇಲ್‍ ಕ್ಷಿಪಣಿ ದಾಳಿ, ಮೂವರಿಗೆ ಗಾಯ

ಅಹಮದಾಬಾದ್‍ನ ಶ್ರೀ ನರೇಂದ್ರ ಮೋದಿ ಅಂತರರಾಷ್ಟ್ರೀಯ ಮೈದಾನದ ಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‍ನ 3ನೇ ದಿನದಾಟದ ಕೊನೆಗೆ 59 ರನ್ ಗಳಿಸುವ ಮೂಲಕ ಶತಕ ಸಿಡಿಸುವ ಮುನ್ಸೂಚನೆ ನೀಡಿದ್ದ ಡೆಲ್ಲಿ ಸ್ಪೋಟಕ ಆಟಗಾರ, 4ನೇ ದಿನದಾಟದ ಆರಂಭದಿಂದಲೂ ಕಾಂಗರೂಗಳ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿ ಸಮಯ ಸಿಕ್ಕಾಗಲೆಲ್ಲಾ ಬೌಂಡರಿಗಳ ಸುರಿಮಳೆ ಸುರಿಸಿದ ವಿರಾಟ್ ಕೊಹ್ಲಿ, 241 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 75ನೇ ಶತಕದ ಸಂಭ್ರಮ ಕಂಡರು.

28 ನೇ ಶತಕ:
ಬಾಂಗ್ಲಾದೇಶ ವಿರುದ್ಧ 2019ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಶತಕ ಗಳಿಸಿ ತಮ್ಮ ಬ್ಯಾಟಿಂಗ್ ವೈಭವ ಮೆರೆದಿದ್ದ ವಿರಾಟ್ ಕೊಹ್ಲಿ , ಅಂದಿನಿಂದಲೂ ಹಲವು ಪಂದ್ಯಗಳಲ್ಲಿ 90 ರ ಗಡಿ ಮುಟ್ಟಿದ್ದರಾದರೂ ಅದನ್ನು ಸೆಂಚುರಿಯಾಗಿ ಪರಿವರ್ತಿಸುವಲ್ಲಿ ಎಡವಿದ್ದರು. ಇಂದಿನ ಪಂದ್ಯದಲ್ಲೂ ಕೂಡ 88 ರನ್ ಗಳಿಸಿದ್ದಾಗ ವಿರಾಟ್ ರನೌಟ್ ಆಗಬೇಕಾಗಿತ್ತಾದರೂ ಅದೃಷ್ಟ ವಶಾತ್ ಪಾರಾಗಿ ರೆಡ್ ಬಾಲ್ ಸ್ವರೂಪದಲ್ಲಿ 28 ಸಿಡಿಸಿ ಗಮನ ಸೆಳೆದಿದ್ದಾರೆ.

ಅರ್ಚಕರ ಮೇಲಿನ ದೌರ್ಜನ್ಯವನ್ನು ದಲಿತ ದೌರ್ಜನ್ಯ ಕಾಯ್ದೆ ವ್ಯಾಪ್ತಿಗೊಳಪಡಿಸಲು ಆಗ್ರಹ

75ನೇ ಸೆಂಚುರಿ ಸಡಗರ:
ಎಲ್ಲಾ ಸ್ವರೂಪದಲ್ಲೂ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಟೆಸ್ಟ್‍ನಲ್ಲಿ 28, ಏಕದಿನದಲ್ಲಿ 46 ಮತ್ತು ಟ್ವೆಂಟಿ-20ಯಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಒಟ್ಟಾರೆ 75 ಶತಕಗಳನ್ನು ಪೂರೈಸಿಕೊಂಡಿದ್ದಾರೆ.

IndvsAus, Virat Kohli, Brings, 75th, First Test, Century, Since 2019,

Articles You Might Like

Share This Article