ರೋಹಿತ್‍ ಶರ್ಮಾ ಅನುಪಸ್ಥಿತಿ, ದ್ರಾವಿಡ್‍ಗೆ ತಗ್ಗಿದ ತಲೆನೋವು

Social Share

ಚತ್ತೋಗ್ರಾಮ್, ಡಿ. 13- ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಸೋಲು ಕಂಡಿದ್ದ ಭಾರತ ತಂಡವು ನಾಳೆಯಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸವಾಲು ಎದುರಿಸಲಿದೆ.

ಬಾಂಗ್ಲಾದೇಶ ವಿರುದ್ಧ ನಡೆದ 2 ಏಕದಿನ ಪಂದ್ಯದ ವೇಳೆ ಕೈ ಬೆರಳಿಗೆ ಗಾಯಗೊಂಡು ಮೊದಲ ಟೆಸ್ಟ್‍ನಿಂದ ಹೊರಗುಳಿ ದಿರುವುದರಿಂದ ಟೀಮ್ ಇಂಡಿಯಾದ ತರಬೇತುದಾರ ರಾಹುಲ್ ದ್ರಾವಿಡ್‍ಗೆ ಆಯ್ಕೆಯ ತಲೆ ನೋವು ತಗ್ಗಿಸಿದೆ ಎಂದು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೈಫ್, ಒಂದು ವೇಳೆ ಟೆಸ್ಟ್ ಗೆ ನಾಯಕ ರೋಹಿತ್ ಶರ್ಮಾ ಲಭ್ಯವಾಗಿದ್ದರೆ, ಆಗ ರಾಹುಲ್ ದ್ರಾವಿಡ್‍ಗೆ ತಂಡದ ಓಪನರ್ಸ್ ಆಟಗಾರರಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಸವಾಲು ಎದುರಾಗುತ್ತಿತ್ತು. ಆದರೆ ಈಗ ರೋಹಿತ್ ಶರ್ಮಾ ಅಲಭ್ಯರಾಗಿರುವುದರಿಂದ ಆರಂಭಿಕರಾಗಿ ನಾಯಕ ಕೆ.ಎಲ್.ರಾಹುಲ್ ಹಾಗೂ ಯುವ ಆಟಗಾರ ಶುಭಮನ್ ಗಿಲ್ ಅವರು ಅಖಾಡಕ್ಕೆ ಇಳಿಯುತ್ತಾರೆ ಎಂದು ಕೈಫ್ ಹೇಳಿದರು.

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ

ತಂಡದ ಉಪನಾಯಕ ರಾಗಿರುವ ಚೇತೇಶ್ವರ್ ಪೂಜಾರ ಅವರು 3ನೆ ಕ್ರಮಾಂಕದಲ್ಲಿ ಆಡಿದರೆ, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಕ್ರಮವಾಗಿ 4, 5 ಹಾಗೂ 6ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಯಬಹುದು.

ನಂತರ ಬ್ಯಾಟಿಂಗ್ ಲಯದಲ್ಲಿ 5 ಬೌಲರ್‍ಗಳ ಪೈಕಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 6ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಾರೆ ಎಂದು ಮೊಹಮ್ಮದ್ ಕೈಫ್ ಹೇಳಿದರು. ರೋಹಿತ್‍ಶರ್ಮಾರ ಬದಲಿ ಆಟಗಾರನಾಗಿ ಆಯ್ಕೆಯಾಗಿ ರುವ ಅಭಿಮನ್ಯು ಈಶ್ವರನ್ ಅವರಿಗೆ ಅವಕಾಶ ದೊರೆಯು ವುದು ಅನುಮಾನ ಎಂದು ಕೈಫ್ ಹೇಳಿದರು.

ತವಾಂಗ್ ಘರ್ಷಣೆ : ರಾಜ್‍ನಾಥ್‍ಸಿಂಗ್ ತುರ್ತು ಸಭೆ

ಐಸಿಸಿ ಟೆಸ್ಟ್‍ನ 2ನೆ ಆವೃತ್ತಿಯ ಫೈನಲ್ ಪಂದ್ಯದ ಸಲುವಾಗಿ ಬಾಂಗ್ಲಾದೇಶ ಸರಣಿಯು ಭಾರತಕ್ಕೆ ಮಹತ್ವದ್ದಾಗಿದ್ದು ಸರಣಿಯ 2 ಪಂದ್ಯಗಳನ್ನೂ ಗೆಲ್ಲುವ ಒತ್ತಡಕ್ಕೆ ಸಿಲುಕಿದೆ.

IND vs BAN, 1st Test, Rahul Dravid, nets, Indian veteran,

Articles You Might Like

Share This Article