ವೇಗದ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಇಶಾನ್ ಕಿಶನ್

Social Share

ಚಿತ್ತೋಗ್ರಾಮ್ , ಡಿ. 10- ಭಾರತ ತಂಡದ ಯುವ ಆಟಗಾರ , ವಿಕೆಟ್ ಕೀಪರ್ ಇಶಾನ್ ಕಿಶನ್ ಅವರು ವೇಗದ ದ್ವಿಶತಕ (210 ರನ್) ಗಳಿಸುವ ಮೂಲಕ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆರಂಭದಲ್ಲೇ ಶಿಖರ್ ಧವನ್ (3 ರನ್)ರ ವಿಕೆಟ್ ಕಳೆದುಕೊಂಡರೂ, ನಂತರ ವಿರಾಟ್ ಕೊಹ್ಲಿ ಹಾಗೂ ಇಶಾನ್ ಕಿಶನ್‍ರ ಜುಗಲ್‍ಬಂದಿಯಲ್ಲಿ ಬಾಂಗ್ಲಾದೇಶದ ಬೌಲರ್‍ಗಳ ಬೆವರಿಸಿದರು.

ವಿರಾಟ್ ಕೊಹ್ಲಿಗಿಂತ ವೇಗವಾಗಿ ರನ್ ಗಳಿಸಿದ ಇಶಾನ್ ಕಿಶನ್ ಕೇವಲ 126 ಎಸೆತಗಳಲ್ಲೇ 200 ರನ್ ಸಿಡಿಸುವ ಮೂಲಕ ವೆಸ್ಟ್‍ಇಂಡೀಸ್‍ನ ಸ್ಪೋಟಕ ಆಟಗಾರ ಕ್ರಿಸ್‍ಗೇಲ್‍ರ ದಾಖಲೆ ಮುರಿದರು. ಕ್ರಿಸ್‍ಗೇಲ್ 138 ಎಸೆತಗಳಲ್ಲಿ 200 ರನ್ ಗಳಿಸಿದ್ದ ಮಹತ್ತರ ದಾಖಲೆಯನ್ನು ಜಾರ್ಖಂಡ್‍ನ ಯುವ ಆಟಗಾರ ಇಶಾನ್ ಕಿಶನ್ ಮುರಿದು ಗಮನ ಸೆಳೆದರು.

ಶತಕ ಗಳಿಸಿದೆ ದ್ವಿಶತಕ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯೂ ಇಶಾನ್ ಕಿಶನ್ ಹೆಸರಿಗೆ ತಳಕು ಹಾಕಿಕೊಂಡಿತು.

ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲುನಿತೀಶ್ ವೈಫಲ್ಯ ಕಾರಣ : ಪ್ರಶಾಂತ್
ವೇಗದ ದ್ವಿಶತಕ ಗಳಿಸಿದ ಆಟಗಾರರು:
ಕ್ರಿಸ್‍ಗೇಲ್- ವೆಸ್ಟ್‍ಇಂಡೀಸ್- 138 ಎಸೆತ- ಜಿಂಬಾಬ್ವೆ ವಿರುದ್ಧ- 2015
ವಿರೇಂದ್ರ ಸೆಹ್ವಾಗ್- ಭಾರತ- 140 ಎಸೆತ- ವೆಸ್ಟ್‍ಇಂಡೀಸ್ ವಿರುದ್ಧ- 2011
ಸಚಿನ್ ತೆಂಡೂಲ್ಕರ್- ಭಾರತ -147 ಎಸೆತ- ದಕ್ಷಿಣ ಆಫ್ರಿಕಾ ವಿರುದ್ಧ- 2010
ಫಕಾರ್ ಝಮಾರ್- ಪಾಕಿಸ್ತಾನ- 148 ಎಸೆತ- ಜಿಂಬಾಬ್ವೆ ವಿರುದ್ಧ- 2018

ರೋಹಿತ್ ಶರ್ಮಾ-ಭಾರತ- 151 ಎಸೆತ- ಶ್ರೀಲಂಕಾ ವಿರುದ್ಧ- 2017

ಮಾರ್ಟಿನ್ ಗುಪ್ಟಿಲ್- ನ್ಯೂಜಿಲೆಂಡ್- 153 ಎಸೆತ- ವೆಸ್ಟ್‍ಇಂಡೀಸ್ ವಿರುದ್ಧ- 2015
ರೋಹಿತ್‍ಶರ್ಮಾ- ಭಾರತ- 156 ಎಸೆತ- ಆಸ್ಟ್ರೇಲಿಯಾ ವಿರುದ್ಧ- 2013

ಗಡಿ ಸಂಘರ್ಷ : ಸೋಮವಾರ ಅಮಿತ್ ಷಾ ಜತೆ ಸಂಸದರ ಮಾತುಕತೆ

ಏಕದಿನದಲ್ಲಿ ದ್ವಿಶತಕ ಗಳಿಸಿದ ಆಟಗಾರರು:
ರೋಹಿತ್ ಶರ್ಮಾ- 264 ರನ್- ಶ್ರೀಲಂಕಾ ವಿರುದ್ಧ- 2014
ಮಾರ್ಟಿನ್‍ಗುಪ್ಟಿಲ್- 237 * ರನ್- ವೆಸ್ಟ್‍ಇಂಡೀಸ್ ವಿರುದ್ಧÀ- 2015
ವಿರೇಂದ್ರ ಸೆಹ್ವಾಗ್- 219 ರನ್- ವೆಸ್ಟ್‍ಇಂಡೀಸ್ ವಿರುದ್ಧ- 2011
ಕ್ರಿಸ್‍ಗೇಲ್- 215 ರನ್- ಜಿಂಬಾಬ್ವೆ ವಿರುದ್ಧ- 2015
ಫಕಾರ್ ಝಮಾರ್- 210 * ರನ್- ಜಿಂಬಾಬ್ವೆ ವಿರುದ್ಧ- 2018
ಇಶಾನ್ ಕಿಶನ್- 210- ಬಾಂಗ್ಲಾದೇಶ ವಿರುದ್ಧ -2022
ರೋಹಿತ್ ಶರ್ಮಾ- 209 ರನ್- ಆಸ್ಟ್ರೇಲಿಯಾ ವಿರುದ್ಧ- 2013
ರೋಹಿತ್ ಶರ್ಮಾ- 208* ರನ್- ಶ್ರೀಲಂಕಾ ವಿರುದ್ಧ- 2017
ಸಚಿನ್‍ತೆಂಡೂಲ್ಕರ್-200 *ರನ್- ದಕ್ಷಿಣ ಆಫ್ರಿಕಾ ವಿರುದ್ಧ- 2010

IND vs BAN, Ishan Kishan, fastest, double century,

Articles You Might Like

Share This Article