ಲಕ್ನೋ, ಅ. 6- ಹರಿಣಿಗಳ ವಿರುದ್ಧ ಟ್ವೆಂಟಿ-20 ಸರಣಿಯನ್ನು ಗೆದ್ದು ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾವು ಇಂದಿನಿಂದ ಆರಂಭಗೊಳ್ಳುವ ಏಕದಿನ ಸರಣಿಯಲ್ಲೂ ಗೆಲುವಿನ ಸಿಂಚನ ಮೂಡಿಸುವ ಉತ್ಸಾಹದಲ್ಲಿ ಶಿಖರ್ ಧವನ್ ಬಳಗವಿತ್ತಾದರೂ ಆರಂಭದಲ್ಲೇ ಮಳೆ ಕಾಟ ಶುರುವಾಗಿದೆ.
ಲಕ್ನೋದಲ್ಲಿ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಮೈದಾನದಲ್ಲಿ ತೇವಾಂಶ ಹೆಚ್ಚಾಗಿರು ವುದರಿಂದ ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವಿನ ಮೊದಲ ಏಕದಿನಕ್ಕೆ ವರುಣ ಅಡ್ಡಿಪಡಿಸಿದಂತಾಗಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ರೋಹಿತ್ ಬಳಗ ಇಂದು ಆಸೀಸ್ ನೆಲಕ್ಕೆ ಪ್ರಯಾಣ ಬೆಳೆಸುತ್ತಿರುವುದರಿಂದ ಶಿಖರ್ ಧವನ್ ನಾಯಕತ್ವದ ಭಾರತ ತಂಡವು ಡಿ ಕಾಕ್ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಹಿರಿಯ ಆಟಗಾರರ ಅನುಪಸ್ಥಿತಿಯಿಂದಾಗಿ ರಜತ್ ಪಾಟೀದಾರ್, ಶಹಬಾಜ್ ಅಹ್ಮದ್ರಂತಹ ಯುವ ಆಟಗಾರರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಕಾತರಿಸುತ್ತಿದ್ದಾರೆ.