Sunday, September 15, 2024
Homeರಾಷ್ಟ್ರೀಯ | Nationalಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಗಮನ ಸೆಳೆದ ಪ್ರಧಾನಿ ಮೋದಿ ರಾಜಸ್ಥಾನಿ ಪೇಟಾ

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಗಮನ ಸೆಳೆದ ಪ್ರಧಾನಿ ಮೋದಿ ರಾಜಸ್ಥಾನಿ ಪೇಟಾ

ನವದೆಹಲಿ,ಆ.15- ದೇಶದ 78 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ ಗಮನ ಸೆಳೆದಿದ್ದು ಅವರ ಪೇಟ.

ಪ್ರತಿ ವರ್ಷವೂ ವೇಷಭೂಷಣಗಳಿಂದಲೇ ಗಮನ ಸೆಳೆಯುವ ಮೋದಿ ಅವರು, ಕೆಂಪು ಕೋಟೆಯಲ್ಲಿ ರಾಜಸ್ಥಾನಿ ಲೆಹರಿಯಾ ಪ್ರಿಂಟ್‌ ಪೇಟಾ ಧರಿಸಿ ಗಮನ ಸೆಳೆದರು. ಶಿರಸಾಣವು ಉದ್ದವಾದ ಬಾಲದೊಂದಿಗೆ ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳ ಮಿಶ್ರಣದಿಂದ ಕೂಡಿದ ಪೇಟ ಧರಿಸಿದ್ದರು. ಇದರೊಂದಿಗೆ ಬಿಳಿ ಕುರ್ತಾ, ತಿಳಿ ನೀಲಿ ಬಣ್ಣದ ಬಂಧಗಾಲಾ ಜಾಕೆಟ್‌ ಹೆಚ್ಚು ಗಮನ ಸೆಳೆಯಿತು.

ಲೆಹರಿಯಾ, ಜವಳಿ ಟೈಡೈ ವಿನ್ಯಾಸವು ರಾಜಸ್ಥಾನದ ಸಾಂಪ್ರದಾಯಿಕ ವೈಭವಕ್ಕೆ ಮತ್ತೊಂದು ಹೆಸರಾಗಿದೆ. ಥಾರ್‌ ಮರುಭೂಮಿಯಲ್ಲಿ ನೆಲೆಸಿರುವ ಜನರು ಹೆಚ್ಚಾಗಿ ಇದನ್ನು ಧರಿಸುತ್ತಾರೆ.

2014ರಲ್ಲಿ ಕ್ಲಾಸಿಕ್‌ ರಾಜಸ್ಥಾನಿ ಶೈಲಿ, 2015ರಲ್ಲಿ ಕ್ರಿಸ್‌‍-ಕ್ರಾಸ್‌‍ ರಾಜಸ್ಥಾನಿ, 2016ರಲ್ಲಿ ರೋಮಾಂಚಕ ಟೈ-ಡೈ ಟರ್ಬನ್‌, 2017ರಲ್ಲಿ ಜ್ಯಾಮಿತೀಯ ಹಳದಿ ಪೇಟ, 2018ರಲ್ಲಿ ಜ್ಯಾಮಿತೀ ಕೇರಸಿ ಪೇಟ, 2019ರಲ್ಲಿ ಓಡ್‌ ಟು ಇಂಡಿಯನ್‌ ಹೆರಿಟೇಜ್‌ ಪೇಟ, 2020ರಲ್ಲಿ ಸ್ಟ್ರೈಕಿಂಗ್‌ ಕೇಸರಿ ಮತ್ತು ಕೆನೆ ಪೇಟ, 2021ರಲ್ಲಿ ರಾಜಸ್ಥಾನದ ಸಂಪ್ರದಾಯ ಮತ್ತು ಸ್ಥಿತಿಸ್ಥಾಪಕತ್ವದ ಪೇಟ ಹಾಗೂ ವಸ ಧರಿಸಿದರು.

2022ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆಂಪು, ಕೇಸರಿ ಮಿಶ್ರಿತ ಪೇಟ ಧರಿಸಿದ್ದ ನಮೋ, 2023ರಲ್ಲಿ ಹಳದಿ, ಹಸಿರು ಮತ್ತು ಕೆಂಪು ಮಿಶ್ರಿತ ರಾಜಸ್ಥಾನಿ ಬಂಧನಿ ಮುದ್ರಣ ಪೇಟ ಧರಿಸಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ ದಿನವನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 7.30ರ ಸುಮಾರಿಗೆ ಧ್ವಜಾರೋಹಣ ನೆರವೇರಿಸಿ, ದೇಶದ ಜನತೆಗೆ ಸ್ವಾತಂತ್ರೋತ್ಸವದ ಶುಭಕೋರಿದರು.

RELATED ARTICLES

Latest News