ಸ್ವಾತಂತ್ರೋತ್ಸವ ಸಂಭ್ರಮ : ಕರ್ನಾಟಕದ ಇಬ್ಬರು ವಿದ್ಯಾರ್ಥಿಗಗಳಿಗೆ ಪ್ರಧಾನಿ ಆಹ್ವಾನ

ನವದೆಹಲಿ,ಆ.13- ದೇಶದ 78ನೇಸ್ವಾತಂತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವಂತೆ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳನ್ನು ಪ್ರಧಾನಿ ಕಾರ್ಯಾಲಯ ಅತಿಥಿಗಳನ್ನಾಗಿ ಆಹ್ವಾನಿಸಿದೆ. ಕರ್ನಾಟಕದ ಗದಗ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌‍ಎಸ್‌‍ ಘಟಕದ ವಿದ್ಯಾರ್ಥಿಗಳಾದ ಸತೀಶ್‌ ಕನ್ನೇರ್‌ ಹಾಗೂ ಆದಿತ್ಯ ಕೊರವರ ಅವರನ್ನು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಮಂತ್ರಣ ನೀಡಲಾಗಿದೆ. ಕೇಂದ್ರ ಸರ್ಕಾರದ ಮೇರಿ ಮಾಟಿ, ಮೇರಾ ದೇಶ ಕಾರ್ಯಕ್ರಮವನ್ನು ಕಾಲೇಜಿನ ಎನ್‌ಎಸ್‌‍ಎಸ್‌‍ ಘಟಕ ಯಶಸ್ವಿ ಮಾಡುತ್ತ ಬಂದಿದೆ. ಅಮೃತ ವಾಟಿಕಾ ಕಾರ್ಯಕ್ರಮದಡಿ, 50 ಗಿಡಗಳನ್ನು ನೆಟ್ಟು ಸತೀಶ್‌ … Continue reading ಸ್ವಾತಂತ್ರೋತ್ಸವ ಸಂಭ್ರಮ : ಕರ್ನಾಟಕದ ಇಬ್ಬರು ವಿದ್ಯಾರ್ಥಿಗಗಳಿಗೆ ಪ್ರಧಾನಿ ಆಹ್ವಾನ