200 ಕೋಟಿ ಡೋಸೇಜ್ : ಭಾರತ ಹೊಸ ಮೈಲಿಗಲ್ಲು

Social Share

ನವದೆಹಲಿ,ಜು.17- ಕೋವಿಡ್ ವಿರುದ್ಧ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿರುವ ಭಾರತ ಸರ್ಕಾರ, ಒಟ್ಟು 200 ಕೋಟಿ ಡೋಸೇಜ್ ಲಸಿಕೆಗಳನ್ನು ನೀಡುವ ಮೂಲಕ ಇಂದಿಗೆ ದಾಖಲಾರ್ಹ ಸಾಧನೆ ಮಾಡಿದೆ. 2021ರ ಜನವರಿ 16ರಂದು 18 ತಿಂಗಳ ಹಿಂದೆ ಆರಂಭವಾದ ಕೋವಿಡ್ ಲಸಿಕಾ ಅಭಿಯಾನ ಹಂತ ಹಂತವಾಗಿ ಜನಪ್ರಿಯತೆ ಪಡೆದು ಏಳು ಹಂತಗಳಲ್ಲಿ ಅಭಿಯಾನ ನಡೆದಿದೆ.

ಪ್ರಧಾನಿ ನರೇಂದ್ರಮೋದಿ ಅವರ ದೃಢ ನಾಯಕತ್ವದಲ್ಲಿ ಮಹತ್ ಸಾಧನೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ, ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ,ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಶ್ಲಾಘಿಸಿದ್ದಾರೆ.

ಮೊದಲಿಗೆ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಲಸಿಕೆಯನ್ನು ಘೋಷಿಸಿತ್ತು. ನಂತರ ಹಂತದಲ್ಲಿ 18 ಮೇಲ್ಪಟ್ಟವರನ್ನು ಒಳಗೊಳ್ಳಲಾಯಿತು. ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದ್ದು, 2ನೇ ಹಂತದ ಲಸಿಕೆ ಪಡೆದವರಿಗೆ ಮುನ್ನೆಚ್ಚರಿಕೆ ಡೋಸೆಜ್ ಕೂಡ ನೀಡಲಾಗುತ್ತಿದೆ.

ಕೋವಿಡ್ ಲಸಿಕೆ ಸಂಶೋಧನೆ, ಆವಿಷ್ಕಾರ, ಪ್ರಯೋತ ಮತ್ತು ಉತ್ಪಾದನೆಯಲ್ಲಿ ಭಾರತ ನಿರೀಕ್ಷೆ ಮೀರಿದ ವೇಗದಲ್ಲಿ ಮುನ್ನುಗ್ಗಿದೆ. ಈ ಕುರಿತು ಇಂದು ಟ್ವೀಟ್ ಮಾಡಿರುವ ಪ್ರಧಾನಿ ಅವರು, ಭಾರತ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. 200 ಕೋಟಿ ಡೋಸೇಜ್ ಲಸಿಕೆ ಸಾಧನೆಗಾಗಿ ಭಾರತೀಯರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಅತಿವೇಗ ಮತ್ತು ಸಾಟಿ ಇಲ್ಲದ ಪ್ರಮಾಣದಲ್ಲಿ ಸಾಧನೆಗೆ ಸಹಕರಿಸಿದ ಹಾಗೂ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ಶಕ್ತಿ ತುಂಬಿದ ಎಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ. ನಮ್ಮ ವೈದ್ಯರು, ನರ್ಸ್‍ಗಳು, ಮುಂಚೂಣಿ ಹೋರಾಟಗಾರರು, ವಿಜ್ಞಾನಿಗಳು, ಅನ್ವೇಷಕರು, ಲಸಿಕಾ ಅಭಿಯಾನದ ಯಶಸ್ವಿಯಲ್ಲಿ ಕೈ ಜೋಡಿಸಿದ್ದಾರೆ.

ಲಸಿಕೆಯ ಪರಿಚಯದಿಂದ ಹಿಡಿದು ಈವರೆಗೂ ಎಲ್ಲರ ಪಾತ್ರ ಸಕ್ರಿಯವಾಗಿದೆ. ಭೂ ಗ್ರಹದ ಸುರಕ್ಷಿತ ಖಾತ್ರಿಗೆ ಎಲ್ಲರ ಪಾತ್ರ ಪ್ರಮುಖವಾದದ್ದು ಎಂದು ಮೋದಿ ಶ್ಲಾಘಿಸಿದ್ದಾರೆ.

Articles You Might Like

Share This Article