ವಿಶ್ವಸಂಸ್ಥೆ,ಡಿ.10- ನಿರ್ಬಂಧಗಳ ಹೊರತಾಗ ಮಾನವೀಯ ನೆರವು ನೀಡುವ ಪ್ರಯತ್ನಗಳನ್ನು ಪುಷ್ಟೀಕರಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯವನ್ನು ವಿರೋಧಿಸಿ ಭಾರತ ಮತದಾನದಲ್ಲಿ ತಟಸ್ಥವಾಗಿ ಉಳಿದಿದೆ.
ಅಮೆರಿಕ ಮತ್ತು ಇಸ್ರೇಲ್ ದೇಶಗಳಿಂದ ಮಂಡನೆಯಾದ ನಿರ್ಣಯ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚರ್ಚಿಸಲಾಗಿದೆ.
15 ಸದಸ್ಯ ರಾಷ್ಟ್ರಗಳ 14 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದಾರೆ. ಭಾರತ ತಟಸ್ಥವಾಗಿ ಉಳಿದಿದೆ.
ಆದರೆ ಚರ್ಚೆಯಲ್ಲಿ ಭಾಗವಹಿಸಿದ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ರುಚಿರಕಾಂಬೋಜ್ ಅವರು ಮಾನವೀಯ ನೆರವನ್ನು ದುರುಪಯೋಗಪಡಿಸಿ ಕೊಂಡು ಉಗ್ರ ಸಂಘಟನೆಗಳು ಬಲಿಷ್ಠ ಗೊಳ್ಳುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಮ್ಮ ನೆರೆಹೊರೆಯಲ್ಲಿ ಈ ಅನುಭವವನ್ನು ಕಂಡಿದ್ದೇವೆ. ಇದೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ಭಯೋತ್ಪಾದಕರೆಂದು ಗುರುತಿಸಿದವರಿಗೆ ಕೆಲವು ರಾಷ್ಟ್ರಗಳು ಸರ್ಕಾರಿ ರಾಜಾತಿಥ್ಯ ನೀಡಲಾಗುತ್ತಿವೆ.
ಹಿಮಾಚಲ ಸಿಎಂ ಆಯ್ಕೆ ಜವಾಬ್ದಾರಿ ಪ್ರಿಯಾಂಕ ಹೆಗಲಿಗೆ
ಮುಂದಿನ ದಿನಗಳಲ್ಲಿ ಮಾನವೀಯ ನೆರವಿನ ಹೆಸರಿನಲ್ಲಿ ದೊರೆಯಬಹುದಾದ ಸೌಲಭ್ಯಗಳನ್ನು ಬಳಸಿಕೊಂಡು ಮತ್ತಷ್ಟು ಶ್ರೀಮಂತರಾಗುವ ಸಾಧ್ಯತೆ ಇದೆ. ಹೀಗಾಗಿ ಮಾನವೀಯ ನೆರವು ನೀಡುವ ಎಚ್ಚರಿಕೆ ಮತ್ತು ಶ್ರದ್ದೆಯನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.
ಇಷ್ಟು ದಿನ ನೀವು ಪೂಜಿಸಿದ ವಿಗ್ರಹ ಹಿಂದೂ ದೇವರಲ್ಲ. ಅದು ಬುದ್ಧನ ಶಿಲ್ಪ : ಮದ್ರಾಸ್ ಹೈಕೋರ್ಟ್
ಮಾನವೀಯ ಮೂಲಭೂತ ನೆರವು ಎಂಬುದು ಅಪಹಾಸ್ಯವಾಗಬಾರದು. ಅರ್ಹ ಮತ್ತು ಅಗತ್ಯವುಳ್ಳವರಿಗೆ ನೆರವಾಗಬೇಕು. ಭಯೋತ್ಪಾದಕ ಸಂಘಟನೆಗಳಿಗೆ ಅದು ರಕ್ಷಣಾತ್ಮಕ ಛತ್ರಿಯಾಗಬಾರದು ಎಂದು ಹೇಳಿದ್ದಾರೆ.
ಪರೋಕ್ಷವಾಗಿ ಪಾಕಿಸ್ತಾನವನ್ನು ಬೊಟ್ಟು ಮಾಡುವ ಮೂಲಕ ನಮ್ಮ ನೆರೆಹೊರೆಯಲ್ಲಿ ಭಯೋತ್ಪಾದಕರ ಮತ್ತು ಭಯೋತ್ಪಾದಕರ ಬೆಳವಣಿಗೆಗೆ ಸಹಕಾರ ನೀಡಲಾಗುತ್ತಿದೆ ಎಂದು ರುಚಿರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
India, abstains, UNSC, resolution, humanitarian, sanctioned, entities,