ವಿಶ್ವಸಂಸ್ಥೆಯ ವಿಶೇಷ ತುರ್ತು ಅವೇಶನದಲ್ಲೂ ಭಾರತ ತಟಸ್ಥ ನಿಲುವು

Social Share

ವಿಶ್ವಸಂಸ್ಥೆ, ಫೆ.28- ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣದ ಕುರಿತು ವಿಶ್ವಸಂಸ್ಥೆ ಸಾಮಾನ್ಯ ಸಭೆ (ಯುಎನ್‍ಎಸ್‍ಸಿ) ವಿಶೇಷ ತುರ್ತು ಅಧಿವೇಶನದ ನಿರ್ಣಯದಿಂದಲೂ ಭಾರತ ದೂರ ಉಳಿದಿದೆ. ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣಶೀಲತೆಯ ವಿರುದ್ಧವಾದ ನಿರ್ಣಯವನ್ನು ಅಂಗೀಕರಿಸಲು ವಿಶ್ವಸಂಸ್ಥೆ ಅಪರೂಪದ ತುರ್ತು ಅಧಿವೇಶನ ಸಮಾವೇಶಗೊಂಡಿತ್ತು.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಕುರಿತು 15 ರಾಷ್ಟ್ರಗಳ ಭದ್ರತಾ ಮಂಡಳಿಯು ಸಾಮಾನ್ಯ ಸಭೆಯ ತುರ್ತು ವಿಶೇಷ ಅವೇಶನದ ಭಾನುವಾರ ಮಧ್ಯಾಹ್ನ ಸಭೆ ಸೇರಿತು. ಅಲ್ಲಿ ಭಾರತ, ಯೂರೋಪ್, ಚೀನಾ ಸೇರಿ ಮೂರು ರಾಷ್ಟ್ರಗಳು ಮತದಾನದಿಂದ ದೂರ ಉಳಿದಿದ್ದವು.
ರಷ್ಯಾದ ವೀಟೋ ನಿರ್ಬಂಸಿದ ಭದ್ರತಾ ಮಂಡಳಿಯ ನಿರ್ಣಯದ ಎರಡು ದಿನಗಳ ಬಳಿಕ ಸಮಾವೇಶಗೊಂಡ 193 ಸದಸ್ಯ ರಾಷ್ಟ್ರಗಳ ಸಾಮಾನ್ಯ ಸಭೆಯ ಅಧಿವೇಶನದಲ್ಲೂ ಮತದಾನ ನಡೆದಿದೆ.  1950 ರಿಂದೀಚೆಗೆ ಸಾಮಾನ್ಯ ಸಭೆಯ ಇಂತಹ 10 ತುರ್ತು ಅವೇಶನಗಳು ಮಾತ್ರ ನಡೆದಿವೆ. ಇಲ್ಲಿಯೂ ಭಾರತ ಮತದಾನದಿಂದ ದೂರ ಉಳಿದಿದೆ.

Articles You Might Like

Share This Article