ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಪರ ಮತದಾನದಿಂದ ದೂರ ಉಳಿದ ಭಾರತ

Social Share

ನವದೆಹಲಿ, ಫೆ.26- ಉಕ್ರೇನ್ ಮೇಲೆ ರಷ್ಯಾದ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಮತ್ತು ಎಲ್ಲಾ ಸೇನಾ ಪಡೆಗಳನ್ನು ಹಿಂಪಡೆದುಕೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಕರಡು ನಿರ್ಣಯವನ್ನು ಅಂಗೀಕರಿಸಿದೆ.
ಅಂತರ ರಾಷ್ಟ್ರೀಯ ಕಾಲಮಾನದಲ್ಲಿ ಇಂದು ಬೆಳಗ್ಗೆ ನಡೆದ ಮಹತ್ವದ ಸಭೆಯಲ್ಲಿ 15 ಸದಸ್ಯ ರಾಷ್ಟ್ರಗಳ ಪೈಕಿ ಪ್ರಮುಖವಾದ ಭಾರತ, ಚೀನಾ, ಅರಬ್ ಎಮಿರೆಟ್ಸ್ ಸಂಯುಕ್ತ ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ. ಉಳಿದ 11 ರಾಷ್ಟ್ರಗಳು ರಷ್ಯ ವಿರುದ್ಧ ಮತ ಹಾಕಿದ್ದು, ರಷ್ಯ ಏಕಾಂಗಿಯಾಗಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಮತದಾನದಿಂದ ಹೊರಗುಳಿದಿದೆ. ಉಳಿದಂತೆ ರಷ್ಯ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಆದರೆ ಅದಕ್ಕೆ ಮತದಾನಕ್ಕೆ ಅವಕಾಶ ಇಲ್ಲವಾದ್ದರಿಂದ ಭದ್ರತಾ ಮಂಡಲಿಯ ನಿರ್ಣಯಕ್ಕೆ ವಿರುದ್ಧವಾಗಿ ಒಂದು ಮತವೂ ಬಿದ್ದಿಲ್ಲ.
ಪ್ರಾನ್ಸ್, ಇಂಗ್ಲೆಂಡ್, ಅಮೆರಿಕಾ ರಾಷ್ಟ್ರಗಳು ರಷ್ಯಾದ ವಿರುದ್ಧ ಮತ ಚಲಾವಣೆ ಮಾಡಿವೆ. ಖಾಯಂ ಸದಸ್ಯರಲ್ಲದ ದೇಶಗಳಾದ ಬಲ್ಬೇನಿಯಾ, ಬ್ರಿಜಿಲ್, ಗಾಬಾನ್, ಘಾನಾ, ಇರ್ಲೆಂಡ್, ಕೀನ್ಯಾ, ಮೆಕ್ಸಿಕೋ, ನಾರ್ವೆ ಕೂಡ ಭದ್ರತಾ ಮಂಡಳಿಯ ನಿರ್ಣಯವನ್ನು ಬೆಂಬಲಿಸಿವೆ. ಭಾರತ, ಅರಬ್ ಎಮಿರೆಟ್ಸ್ ರಾಷ್ಟ್ರಗಳು ಮತದಾನ ಪ್ರಕ್ರಿಯೆಗೆ ಗೈರು ಹಾಜರಾಗಿವೆ.
ಭದ್ರತಾ ಮಂಡಳಿಯ ನಿರ್ಣಯದ ಹೊರತಾಗಿಯೂ ರಷ್ಯ ಉಕ್ರೇನ್ ಮೇಲಿನ ತನ್ನ ದಾಳಿಯನ್ನು ಮುಂದುವರೆಸಿದೆ. ಮಂಡಳಿಯ ಸಭೆಯ ಬಳಿಕ ವಿಶ್ವಸಂಸ್ಥೆ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದು, ಯುದ್ಧವನ್ನು ಕೊನೆಗಾಣಿಸುವ ಸಮರಕ್ಕಾಗಿಯೇ ವಿಶ್ವಸಂಸ್ಥೆ ಹುಟ್ಟಿದೆ. ಆದರೆ ಇಂದು ನಾವು ನಮ್ಮ ಉದ್ದೇಶವನ್ನು ಸಾಧಿಸುವಲ್ಲಿ ವಿಫಲವಾಗಿದ್ದೇವೆ. ಆದರೂ ನಾವು ಸೋಲಬಾರದು. ಶಾಂತಿ ಮರುಸ್ಥಾಪನೆಯ ಹಕ್ಕುಸ್ವಾಮ್ಯತೆ ಮತ್ತೊಂದು ಅವಕಾಶ ನೀಡಬೇಕು ಎಂದು ಹೇಳಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟ್ರೆಸ್, ಯುದ್ಧ ಪೀಡಿತ ಪ್ರದೇಶಗಳಲ್ಲಿ ನಿರಾಶ್ರೀತರು ಮತ್ತು ವಲಸಿಗರಿಗೆ ನೆರವು ನೀಡಲು ವಿಶ್ವಸಂಸ್ಥೆ ಸಂಚಾಲಕರನ್ನು ನಿಯೋಜಿಸಲಿದೆ ಎಂದು ಹೇಳಿದ್ದಾರೆ.
ವಿಶ್ವಂಸ್ಥೆ ಯುದ್ಧ ಭಾದಿತ ಜನರಿಗೆ ಆಹಾರ, ಔಷಧಿ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲಿದೆ. ನಿರಾಶ್ರಿತರ ಪುನರ್ವಸತಿಗಾಗಿ ಕೆಲಸ ಮಾಡುವ ವಿಶ್ವಸಂಸ್ಥೆ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ಸಂಚಾಲಕರ ತಂಡ ಕೆಲಸ ನಿರ್ವಹಿಸಲಿದೆ. ಒಂದು ತಂಡ ಉಕ್ರೇನ್ ಗೆ ತೆರಳಲಿದೆ, ಆಕ್ರಮಣಶೀಲತೆಯನ್ನು ಅನುಸರಿಸುತ್ತಿರುವ ರಷ್ಯಾಕ್ಕೂ ಮಾನವೀಯ ನೆರವು ನೀಡುವುದಾಗಿ ಹೇಳಿದ್ದಾರೆ.

Articles You Might Like

Share This Article