ಭಾರತದ ಮೇಲೆ ಅಣ್ವಸ್ತ್ರ ದಾಳಿಗೆ ಸಜ್ಜಾಗಿದ್ದ ಪಾಕ್..!

Social Share

ನವದೆಹಲಿ, ಜ.25- ಕಳೆದ 2019ರಲ್ಲಿ ಬಾಲಕೋಟ್‍ನಲ್ಲಿ ನಡೆದ ಭಾರತೀಯ ವಾಯುಪಡೆಯ ದಾಳಿ ಬಳಿಕ ಪಾಕಿಸ್ತಾನ ಅಣ್ವಸ್ತ್ರ ದಾಳಿಗೆ ಸಿದ್ಧತೆ ನಡೆಸಿತ್ತು ಎಂಬ ಆಘಾತಕಾರಿ ವಿಷಯವನ್ನು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಬಹಿರಂಗಪಡಿಸಿದ್ದಾರೆ.

ಅವರ ನೆರವ್‍ಗೀವ್ ದ ಇಂಚ್ ಪುಸ್ತಕದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಭಾರತ ಕೂಡ ಇದಕ್ಕೆ ಪ್ರತ್ಯುತ್ತರ ನೀಡಲು ಸಿದ್ಧವಿತ್ತು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಈ ನಡುವೆ ಉತ್ತರ ಕೊರಿಯಾದಲ್ಲಿದ್ದ ನಾನು ರಾತ್ರಿಯಿಡೀ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ ಪರಮಾಣು ಯುದ್ಧ ತಡೆಯಲು ಪ್ರಯತ್ನಿಸಿದ್ದೆ ಎಂದು ಹೇಳಿದ್ದಾರೆ.

ಪಠಾಣ್ ಚಿತ್ರದ ವಿರುದ್ಧ ಕರ್ನಾಟಕದಲ್ಲೂ ಭುಗಿಲೆದ್ದ ಆಕ್ರೋಶ

ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದಾಗರಾತ್ರಿಯಿಡೀ ನಾನು ಈ ಪರಿಸ್ಥಿತಿಯನ್ನು ಶಮನಗೊಳಿಸಲು ಭಾರೀ ಕಸರತ್ತು ನಡೆಸಲಾಗಿತ್ತು. ಪುಲ್ವಾಮಾದಲ್ಲಿ 40 ಸಿಆರ್‍ಪಿಎಫ್ ಯೋಧರು ಉಗ್ರರ ದಾಳಿಯಲ್ಲಿ ಹುತಾತ್ಮರಾದ ನಂತರ ಕೆರಳಿದ್ದ ಭಾರತ ಪಾಕ್ ಆಕ್ರಮಿತ ಬಾಲಕೋಟ್‍ನಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲು ಏರ್‍ಸ್ಟ್ರೈಕ್ ನಡೆದಿತ್ತು. ಈ ಯುದ್ಧ ನಡೆದಿದ್ದರೆ ಜಗತ್ತು ಏನಾಗುತ್ತಿತ್ತೋ ಎಂಬುದು ತಿಳಿಯುತ್ತಿರಲಿಲ್ಲ ಎಂದು ಬರೆದಿದ್ದಾರೆ.

India, Pakistan, close, nuclear war Pompeo,

Articles You Might Like

Share This Article