ಅಧಿವೇಶನದಲ್ಲೂ ಇಂಡಿ ಒಕ್ಕೂಟದ ಒಗ್ಗಟ್ಟು ಮುಂದುವರಿಕೆ

ನವದೆಹಲಿ,ಜೂ.24- ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ವಿರುದ್ಧ ಒಗ್ಗಟ್ಟಾಗಿದ್ದ ಇಂಡಿ ಒಕ್ಕೂಟದ ಸದಸ್ಯರು ಲೋಕಸಭೆ ಅಧಿವೇಶನದಲ್ಲೂ ಮೈತ್ರಿ ಮುಂದುವರೆಸಲು ತೀರ್ಮಾನಿಸಿದ್ದಾರೆ. ಇಂದಿನಿಂದ ಶುರುವಾಗಲಿರುವ ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಆಡಳಿತ ಪಕ್ಷದ ವಿರುದ್ಧ ಸಮರ ಸಾರಲು ಸನ್ನದ್ಧರಾಗಿದ್ದಾರೆ. ಏಕತೆಯ ಸಂಕೇತವಾಗಿ ಎಲ್ಲಾ ಇಂಡಿ ಒಕ್ಕೂಟದ ಸಂಸದರು ಒಟ್ಟಾಗಿ ಲೋಕಸಭೆಯನ್ನು ಪ್ರವೇಶಿಸುವ ಮೂಲಕ ಒಗ್ಗಟ್ಟು ಮುಂದುವರೆಯಲಿದೆ ಎಂಬ ಸೂಚನೆ ರವಾನಿಸಿದ್ದಾರೆ.ಜುಲೈ 3ರವರೆಗೆ ನಡೆಯಲಿರುವ ಅಧಿವೇಶನದ ಮೊದಲ ಎರಡು ದಿನಗಳಲ್ಲಿ ನೂತನ ಸಂಸದರು … Continue reading ಅಧಿವೇಶನದಲ್ಲೂ ಇಂಡಿ ಒಕ್ಕೂಟದ ಒಗ್ಗಟ್ಟು ಮುಂದುವರಿಕೆ