ಮುಂಬೈ,ಜ.29- ಗುಜರಾತ್‍ನಲ್ಲಿ 2002ರಲ್ಲಿ ನಡೆದ ಹತ್ಯಾಖಾಂಡ ಆಧರಿಸಿದ ಬಿಬಿಸಿಯ ಸಾಕ್ಷ್ಯ ಚಿತ್ರವನ್ನು ಕೇರಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ನಡೆಸಿದ ಬಳಿಕ ಈಗ ಒಂದೊಂದಾಗಿ ಇತರ ಭಾಗದಲ್ಲಿ ಪ್ರದರ್ಶನಗಳಿಗೆ ತಯಾರಿಗಳು ನಡೆದಿವೆ.
ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್‍ಎಸ್)ನಲ್ಲಿ ಪ್ರದರ್ಶನ ಆಯೋಜಿಸಿದ್ದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಸಿರುವುದನ್ನು ಸಾಂಕೇತಿಕವಾಗಿ ವಿರೋಸಿ ಪ್ರಗತಿಶೀಲ ವಿದ್ಯಾರ್ಥಿಗಳ ವೇದಿಕೆ (ಪಿಎಸ್‍ಎಫ್) ಪ್ರದರ್ಶನ ಆಯೋಜಿಸಿತ್ತು. ಇದಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತರು ವಿಶ್ವವಿದ್ಯಾಲಯದ ಆವರಣದ ಹೊರಗೆ ಪ್ರತಿಭಟನೆ ನಡೆಸಿದರು.
ದೇಶದ ಜನರ ನಡುವೆ ಬಿರುಕು ಮೂಡಿಸುವ ಯತ್ನಗಳು ನಡೆಯುತ್ತಿವೆ, ಎಚ್ಚರದಿಂದಿರಿ : ಮೋದಿ
ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸದಂತೆ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿದೆ. ಈ ರೀತಿಯ ಪ್ರದರ್ಶನಕ್ಕೆ ಸಂಸ್ಥೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಪ್ರದರ್ಶನ ರದ್ದುಗೊಂಡಿದೆ.
ಉಳಿದಂತೆ ದೆಹಲಿ ಸೇರಿ ಹಲವು ಕಡೆಗಳಲ್ಲಿ ಪ್ರಗತಿಪರ ನೆಲೆಯಲ್ಲಿ ಗುರುತಿಸಿಕೊಂಡಿರುವ ಸಂಘಟನೆಗಳು, ವಿದ್ಯಾರ್ಥಿ ಸಂಘಗಳು ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಸಜ್ಜುಗೊಂಡಿವೆ. ಎನ್‍ಎಸ್‍ಯುಐ-ಕೆಎಸ್‍ಯು ವಿದ್ಯಾರ್ಥಿ ಸಂಘಟನೆಗಳು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಕರೆ ನೀಡಿದ್ದವು. ಇದರಿಂದ ಉಂಟಾದ ಗೊಂದಲದಿಂದ ದೆಹಲಿ ವಿಶ್ವವಿದ್ಯಾಲಯದ 24 ವಿದ್ಯಾರ್ಥಿಗಳನ್ನು ಬಂಧಿಸಲಾಯಿತು.
ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‍ಎಫ್‍ಐ) ಕಾರ್ಯಕರ್ತರು ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಿದ್ದಾರೆ. ಈ ವೇಳೆ ವಿಶ್ವವಿದ್ಯಾನಿಲಯ ಆಡಳಿತವು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪ್ರದರ್ಶನಕ್ಕೆ ಅಡ್ಡಿ ಪಡಿಸಿತ್ತು.
ಇದೇ ರೀತಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಗಳಲ್ಲೂ ಸಾಕ್ಷ್ಯ ಚಿತ್ರ ಪ್ರದರ್ಶನದ ಯತ್ನಗಳು ನಡೆದಿವೆ. ಹೈದರಾಬಾದ್ ವಿಶ್ವವಿದ್ಯಾನಿಲಯ, ಕೋಲ್ಕತ್ತಾದ ಜಾದವ್‍ಪುರ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ಯುನಿವರ್ಸಿಟಿ ಸೇರಿದಂತೆ ಇತರ ಸಂಸ್ಥೆಗಳು ಪ್ರದರ್ಶನ ಆಯೋಜಿಸಿವೆ.
#India, #blocks, #BBC, #documentary, #PMModi,