ನವದೆಹಲಿ,ಡಿ.22- ಭಾರತದಲ್ಲಿ ಕಾಣಿಸಿಕೊಂಡಿರುವ ಬಿಎಫ್. 7 ಮಾದರಿ ಸೋಂಕಿಗೂ ಚೀನಾದ ಕೋವಿಡ್ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಪರಿಸ್ಥಿತಿಗೂ ಇಲ್ಲಿನ ಪರಿಸ್ಥಿತಿಗೂ ಭಿನ್ನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾದಲ್ಲಿ ಕೊರೊನಾ ಉಲ್ಬಣಗೊಂಡಿದ್ದ ಸಂದರ್ಭದಲ್ಲಿ ಜನರ ರೋಗನಿರೋಧಕ ಶಕ್ತಿ ಅಭಿವೃದ್ಧಿಪಡಿಸದ ಕಾರಣ ಮತ್ತೆ ಅಲ್ಲಿ ಸೋಂಕು ಉಲ್ಬಣಗೊಂಡಿದೆ ಎಂದು ತಜ್ಞರು ಹೇಳಿದ್ದಾರೆ.
ಆದರೆ, ಭಾರತದಲ್ಲಿ ಕೊರೊನಾ ನಿಯಂತ್ರಣದ ಜತೆಗೆ ಬಿಎಫ್.7 ಮಾದರಿಯ ಸೋಂಕು ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸೋಂಕು ಹರಡದಂತೆ ನೋಡಿಕೊಳ್ಳುವ ಉದ್ದೇಶದಿಂದ ಆರೋಗ್ಯ ಸಚಿವಾಲಯ ಮತ್ತೆ ಮಾಸ್ಕ್ ಬಳಕೆಗೆ ಮುಂದಾಗಿರುವುದರಿಂದ ಚೀನಾದ ಪರಿಸ್ಥಿತಿ ಭಾರತದಲ್ಲಿ ಮರುಕಳಿಸಲಾರದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ವಂದೇ ಭಾರತ್, ಶತಾಬ್ದಿ ಸೂಪರ್ಫಾಸ್ಟ್ ರೈಲುಗಳು ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ : ಸಚಿವ ಸೋಮಣ್ಣ
ಚೀನಾದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವ ಬೆನ್ನಲ್ಲೇ ಭಾರತದಲ್ಲಿ ನಾಲ್ಕು ಬಿಎಫ್.7 ಮಾದರಿ ಸೋಂಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿರುವ ಸಮಯದಲ್ಲೇ ಆರೋಗ್ಯ ತಜ್ಞರ ಈ ಹೇಳಿಕೆ ತುಸು ನೆಮ್ಮದಿ ತರಿಸಿದೆ.
ಇತ್ತಿಚೆಗೆ ಕಾಣಿಸಿಕೊಂಡಿರುವ ಬಿಎಫ್.7 ಹೊಸ ರೂಪಾಂತರವಲ್ಲ ಅದು ಕೇವಲ ಬಿಎ.5 ರೂಪಾಂತರವಷ್ಟೇ. ಈ ಸೋಂಕನ್ನು ಹೊಡೆದೋಡಿಸಲು ಈಗಾಗಲೇ ಎಲ್ಲ ಕ್ರಮಗಳನ್ನು ಕೈಗೊಂಡಿರುವುದರ ಜತೆಗೆ ಮತ್ತೆ ದೇಶದಲ್ಲಿ ಅಗತ್ಯ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದರಿಂದ ಭಾರತದ ಪರಿಸ್ಥಿತಿ ಚೀನಾದಷ್ಟು ವಿಷಮಿಸುವುದಿಲ್ಲ. ಆದರೂ ಜನ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ನೂತನ RTO ಕಚೇರಿ ತೆರೆಯುವ ಪ್ರಸ್ತಾವನೆ ಇಲ್ಲ : ಶ್ರೀರಾಮುಲು
India, China, Covid situation, different,