ಭಾರತದಲ್ಲಿ ಕೊರೋನಾ ಮಾಹಾ ಸ್ಫೋಟ, ಒಂದೇ ದಿನ 58,097 ಕೇಸ್ ದಾಖಲು

Social Share

ನವದೆಹಲಿ,ಜ.5- ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 58,097 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಹೋಲಿಸಿದರೆ ಶೇ.55ರಷ್ಟು ಅಧಿಕವಾಗಿದೆ. ಸರ್ಕಾರವು ದೇಶದಾದ್ಯಂತ ಲಸಿಕೆ ಹಾಕುವ ಆಂದೋಲನವನ್ನು ತ್ವರಿತಗೊಳಿಸುತ್ತಿದೆ. 15ರಿಂದ 18ರ ವಯೋಮಾನದವರಿಗೆ ಈಗ ವ್ಯಾಪಕವಾಗಿ ಲಸಿಕೆ ಹಾಕಿಸಲಾಗುತ್ತಿದೆ.
ನಿನ್ನೆ 534 ಮಂದಿ ಕೋವಿಡ್‍ಗೆ ಬಲಿಯಾಗಿದ್ದು, ಒಟ್ಟಾರೆ ಕೋವಿಡ್ ಮರಣ ಪ್ರಮಾಣ 4,82,551ಕ್ಕೆ ಏರಿದೆ ಎಂದು ಅಂಕಿಅಂಶಗಳು ತಿಳಿಸಿವೆ.
ಇದುವರೆಗೆ ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್‍ನ ಒಟ್ಟು 2,135 ಪ್ರಕರಣಗಳು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿದ್ದು, ಈ ಪೈಕಿ 828 ಸೋಂಕಿತರು ಗುಣಮುಖರಾಗಿದ್ದಾರೆ ಅಥವಾ ವಲಸೆ ಹೋಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಾಜಾ ಮಾಹಿತಿ ನೀಡಿದೆ.
ಕೋವಿಡ್ ಪ್ರಕರಣಗಳು ಏರುತ್ತಲೇ ಇರುವುದರಿಂದ ಹಲವಾರು ರಾಜ್ಯಗಳು ರಾತ್ರಿ ಕಫ್ರ್ಯೂನಂತಹ ನಿರ್ಬಂಧಗಳನ್ನು ಪ್ರಕಟಿಸಿವೆ.
ಜಗತ್ತಿನಾದ್ಯಂತ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳು ಹೊಸದಾದ ಅಕ ಅಪಾಯಕಾರಿಯಾದ ರೂಪಾಂತರಿ ಹೊರಹೊಮ್ಮುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಓಮಿಕ್ರಾನ್ ಜಗತ್ತಿನೆಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದರೂ ಇದು ಮೊದಲು ಆತಂಕಪಟ್ಟಷ್ಟು ಅಪಾಯಕಾರಿಯಲ್ಲ ಮತ್ತು ಈ ರೋಗ ಪ್ರಸರಣ ಕಡಿಮೆಯಾಗಿ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ ಎಂಬ ಭರವಸೆಯನ್ನು ಡಬ್ಲ್ಯುಎಚ್‍ಒ ವ್ಯಕ್ತಪಡಿಸಿದೆ. ಆದರೆ ಡಬ್ಲ್ಯುಎಚ್‍ಒ ಹಿರಿಯ ತುರ್ತು ಸ್ಥಿತಿ ಅಕಾರಿ ಕ್ಯಾಥರೀನ್ ಸ್ಮಾಲ್‍ವುಡ್ ಅವರು ಹೆಚ್ಚುತ್ತಿರುವ ಸೋಂಕು ದರವು ವ್ಯತಿರಿಕ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Articles You Might Like

Share This Article