ವಾಷಿಂಗ್ಟನ್,ಫೆ.15- ಭಾರತವು ಕ್ವಾಡ್‍ನ ಚಾಲಕ ಶಕ್ತಿಯಾಗಿದೆ ಮತ್ತು ಪ್ರಾದೇಶಿಕ ಬೆಳವಣಿಗೆಗೆ ಒಂದು ಎಂಜಿನ್‍ನಂತಿದೆ ಎಂದು ಮೆಲ್ಬೋರ್ನ್‍ನಲ್ಲಿ ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಸಚಿವರು ಭೇಟಿ ಮಾಡಿದ ಬಳಿಕ ಅಮೆರಿಕದ ಶ್ವೇತಭವನವು ಹೇಳಿದೆ.
ಕ್ವಾಡ್ ಅಥವಾ ಚತುಃಪಕ್ಷೀಯ(ನಾಲ್ಕು ರಾಷ್ಟ್ರಗಳ) ಮಾತುಕತೆ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನೊಳಗೊಂಡಿದೆ.
ಮೆಲ್ಬೋರ್ನ್ ಶೃಂಗಸಭೆಯಲ್ಲಿ ಈ ರಾಷ್ಟ್ರಗಳ ವಿದೇಶಾಂಗ ಸಚಿವರು ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಅಸ್ಥಿರತೆ ಉಂಟು ಮಾಡುವ ಚೀನಾದ ಪಾತ್ರ ಮತ್ತು ಉಕ್ರೇನ್‍ನಲ್ಲಿ ರಷ್ಯಾದ ಆಕ್ರಮಣ ಕುರಿತು ಚರ್ಚೆ ನಡೆಸಿದರು.
ಅಮೆರಿಕದ ವಿದೇಶಾಂಗ ಸಚಿವ ಟೋನಿ ಬ್ಲಿಂಡೆನ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಚರ್ಚೆಯ ಭಾಗವಾಗಿದ್ದರು.
