ಉಕ್ರೇನ್- ರಷ್ಯಾ ವಾರ್ ವಿಚಾರದಲ್ಲಿ ಭಾರತದ ಜಾಣ ನಡೆ

Social Share

ನವದೆಹಲಿ, ಫೆ.26- ಉಕ್ರೇನ್ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಿಂದ ದೂರ ಉಳಿಯವ ಮೂಲಕ ಭಾರತ, ಮಧ್ಯಸ್ಥಿಕೆಯ ವಹಿಸುವ, ಸಂವಾದ ಮತ್ತು ರಾಜತಾಂತ್ರಿಕತೆಯನ್ನು ಬೆಳೆಸುವ ಎಲ್ಲಾ ಆಯ್ಕೆಗಳನ್ನು ಉಳಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ಉಕ್ರೇನ್ ಮೇಲಿನ ತನ್ನ ದಾಳಿಯನ್ನು ತಕ್ಷಣವೇ ನಿಲ್ಲಿಸಲು ಮತ್ತು ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಮಾಸ್ಕೋವನ್ನು ಒತ್ತಾಯಿಸುವ ನಿರ್ಣಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಲಿ ಬಹುಮತದಲ್ಲಿ ಅಂಗೀಕರಿಸಿದೆ.
ಉಕ್ರೇನ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತವು ತೀವ್ರವಾಗಿ ವಿಚಲಿತಗೊಂಡಿದೆ. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಇತ್ಯರ್ಥಗೊಳಿಸಲು ಮಾತುಕತೆಯೊಂದೇ ಉತ್ತರ ಎಂಬ ತನ್ನ ಸ್ಥಿರ ಮತ್ತು ಸಮತೋಲಿತ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಎರಡು ಕಡೆಗಳಲ್ಲಿ ಸಂಪರ್ಕದಲ್ಲಿದ್ದು, ಸಂಧಾನದ ಮೇಜಿಗೆ ಮರಳಲು ಒತ್ತಾಯಿಸುವ ಆಯ್ಕೆ ಉಳಿಸಿಕೊಂಡಿದೆ. ಭದ್ರತಾ ಮಂಡಳಿಯ ಕರಡು ನಿರ್ಣಯವು ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣಶೀಲತೆಯನ್ನು ಪ್ರಬಲ ಪದಗಳಲ್ಲಿ ಖಂಡಿಸಿದೆ. ರಷ್ಯಾ ತಕ್ಷಣವೇ ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಮತ್ತು ತನ್ನ ಎಲ್ಲಾ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.
ಮತದಾನದಿಂದ ದೂರವಿದ್ದರು ಭಾರತ, ಮತದಾನದ ನಂತರ ತನ್ನ ವಿವರಣೆಯನ್ನು ನೀಡಿದೆ. ಅದರಲ್ಲಿ ರಾಜತಾಂತ್ರಿಕತೆಯ ಹಾದಿಗೆ ಹಿಂತಿರುಗಿ ಎಂದು ಕರೆ ನೀಡಿದೆ. ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಂತೆ ಭಾರತ ಕರೆ ನೀಡಿದೆ. ಹಿಂಸಾಚಾರ ಮತ್ತು ಹಗೆತನವನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.
ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಶ್ಥೆ ಹಕ್ಕು ಸ್ವಾಮ್ಯತೆ ತತ್ವಗಳನ್ನು ಗೌರವಿಸಲು ಭಾರತವು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ. ಈ ಉಪಕ್ರಮ ರಚನಾತ್ಮಕ ಮಾರ್ಗವನ್ನು ಒದಗಿಸುತ್ತವೆ ಎಂದು ಹೇಳಲಾಗಿದೆ.

Articles You Might Like

Share This Article