ವಿಶ್ವ ಹಸಿವು ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಕುಸಿದ ಭಾರತ

Social Share

ನವದೆಹಲಿ,ಅ.23- ವಿಶ್ವ ಹಸಿವು ಸೂಚ್ಯಂಕದಲ್ಲಿ ಭಾರತದ ಕಳಪೆ ಸಾಧನೆ ಮುಂದುವರೆದಿದೆ. 121 ದೇಶಗಳಲ್ಲಿ 2022 ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 107 ನೇ ಸ್ಥಾನಕ್ಕೆ ಕುಸಿದಿದೆ.

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ, ಭಾರತವು 5 ಟ್ರಿಲಿಯನ್ ಆರ್ಥಿಕತೆ ಹೊಂದುವ ಮೂಲಕ ಉದಯೋನ್ಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದರೂ ಹಸಿವು ಸೂಚ್ಯಂಕದಲ್ಲಿ ಹಿಂದೆ ಬಿದ್ದಿರುವುದು ಆಘಾತಕಾರಿ ವಿಷಯವಾಗಿದೆ.

ವಿಪರ್ಯಾಸವೆಂದರೆ, ಭಾರತ ಯುದ್ಧದಿಂದ ಕುಗ್ಗಿ ಹೋಗಿರುವ ಅಫ್ಘಾನಿಸ್ತಾನಕ್ಕಿಂತ ಕೇವಲ ಎರಡು ಸ್ಥಾನದಲ್ಲಿ ಮುಂದಿದೆ. ಇದರ ಜೊತೆಗೆ ಶ್ರೀಲಂಕಾದ ( 64), ನೇಪಾಳದ (81), ಬಾಂಗ್ಲಾದೇಶದ 84 ಮತ್ತು ಪಾಕಿಸ್ತಾನದ 99 ನೆ ಸೂಚ್ಯಂಕದಲ್ಲಿ ಮುಂದುವರೆದಿವೆ.

ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ

ದೇಶದಲ್ಲಿ ಹಸಿವು ತೀವ್ರವಾಗಿದೆ ಮತ್ತು ಬೆಳೆಯುತ್ತಿದೆ ಎಂಬ ಅಂಶವನ್ನು ಹಲವಾರು ತಜ್ಞರು ಖಚಿತಪಡಿಸಿದ್ದಾರೆ. ಹಸಿವು ಹೆಚ್ಚುತ್ತಿರುವುದು ಬಡತನದ ಲಕ್ಷಣವಾಗಿದೆ ಕೆಲವರು ವಾದಿಸಿದ್ದಾರೆ. ಈ ವಾದದಲ್ಲಿ ಎರಡು ಎಳೆಗಳಿವೆ.

ವ್ಯಾಪಕವಾದ ಯಾಂತ್ರೀಕರಣದ ಕಾರಣದಿಂದಾಗಿ, ಕೈಯಿಂದ ಮಾಡಿದ ಕೆಲಸದ ಒತ್ತಡವು ಕಾಲಾನಂತರದಲ್ಲಿ ಕ್ಷೀಣಿಸಿದೆ, ಆದ್ದರಿಂದ ಈ ದಿನಗಳಲ್ಲಿ ದುಡಿಯುವ ಜನರಿಗೆ ಅವರು ಮೊದಲಿನಂತೆ ಹೆಚ್ಚು ಕ್ಯಾಲೊರಿಗಳ ಅಗತ್ಯವಿಲ್ಲ ಎಂಬುದು ಒಂದೆಡೆಯಾದರೆ, ಕೆಲವರು ಆಹಾರಕ್ಕಾಗಿ ಬಳಸುವುದಕ್ಕಿಂತ ಕಡಿಮೆ ಖರ್ಚು ಮಾಡುತ್ತಾರೆ ಮತ್ತು ಇತರ ಉದ್ದೇಶಗಳಿಗಾಗಿ ತಮ್ಮ ಖರ್ಚ ಮಾಡಲಾಗುತ್ತಿದೆ ಎಂಬ ವಾದಗಳು ಕೇಳಿ ಬರುತ್ತಿವೆ.
ಮತ್ತೊಂದು ವಾದದ ಪ್ರಕಾರ ಜನ ಸಂಸ್ಕರಿಸಿದ ಮತ್ತು ಅತ್ಯಾಧುನಿಕ ಆಹಾರ ಪದಾರ್ಥಗಳ ಕಡೆಗೆ ವಾಲುತ್ತಿರುವುದು ಇಂತಹ ಪರಿಸ್ಥಿತಿಗೆ ಕಾರಣವಂತೆ.

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

ಏನೇ ಆಗಲಿ ವಿಶ್ವದ ಬಲಾಢ್ಯ ರಾಷ್ಟ್ರವೆಂದು ಬಿಂಬಿಸಿಕೊಳ್ಳುತ್ತಿರುವ ಭಾರತದ ಹಸಿವು ಸೂಚ್ಯಂಕ ಕುಸಿದಿರುವುದು ಮಾತ್ರ ದುರಂತವೇ ಸರಿ.

Articles You Might Like

Share This Article