ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ಕಲ್ಪಿಸುವಂತೆ ಉಕ್ರೇನ್-ರಷ್ಯಾಗೆ ಮನವಿ

Social Share

ನವದೆಹಲಿ,ಮಾ.6- ಭಾರತದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸುರಕ್ಷಿತ ಕಾರಿಡಾರ್ ಕಲ್ಪಿಸಿಕೊಡುವಂತೆ ಭಾರತ ಉಕ್ರೇನ್ ಮತ್ತು ರಷ್ಯಾ ಸರ್ಕಾರಗಳನ್ನು ಒತ್ತಾಯಿಸಿದೆ.ಸುಮಿ ಹಾಗೂ ಖರ್ಕೀವ್ ಸಮೀಪದ ಫಿಸೋಚಿನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ನಿನ್ನೆ ಸಾಧ್ಯವಾಗಿಲ್ಲ. ಹೀಗಾಗಿ ಸುರಕ್ಷಿತ ಕಾರಿಡಾರ್ ಕಲ್ಪಿಸುವಂತೆ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.
ಮರಿಯುಪೆÇಲೊ, ಒಲೊನೊಓಖಾ ನಗರಗಳಲ್ಲಿ ನಿನ್ನೆ 4 ಗಂಟೆಗಳ ಕಾಲ ಕದನ ವಿರಾಮ ಘೋಷಣೆ ಮಾಡಿ ವಿದ್ಯಾರ್ಥಿಗಳ ಹಾಗೂ ಸ್ಥಳೀಯರ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅದೇ ವೇಳೆ ಉಕ್ರೇನ್‍ನ ಬಹುತೇಕ ಭಾಗಗಳಲ್ಲಿ ರಷ್ಯಾ ತನ್ನ ಆಕ್ರಮಣದ ತೀವ್ರತೆಯನ್ನು ಕಡಿಮೆ ಮಾಡಿ ಸ್ಥಳಾಂತರಕ್ಕೆ ಅವಕಾಶ ನೀಡಿರುವುದಾಗಿ ಹೇಳಿತ್ತು.
ಆದರೆ ಈ ನಡುವೆ ರಷ್ಯಾ ಕದನ ವಿರಾಮ ಉಲ್ಲಂಘಿಸಿ ಶೆಲ್ ದಾಳಿ ನಡೆಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಕೂಡ ಪ್ರತಿದಾಳಿ ನಡೆಸಿದ್ದರಿಂದ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಸಾದ್ಯವಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಸುಮಿ, ಫಿಸೋಚಿನ್ ಹಾಗೂ ಇತರ ಭಾಗಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸುರಕ್ಷಿತ ಕಾರಿಡಾರ್ ವ್ಯವಸ್ಥೆ ಮಾಡಬೇಕು. ನಿನ್ನೆ 4 ಬಸ್‍ಗಳಲ್ಲಿ ವಿದ್ಯಾರ್ಥಿಗಳನ್ನು ಗಡಿಭಾಗಕ್ಕೆ ಕರೆತರಲಾಗಿದೆ. ಇನ್ನು 5 ಬಸ್‍ಗಳು ಅಲ್ಲೇ ಸಿಲುಕಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದರು.
ಕಳೆದ 24 ಗಂಟೆಗಳಲ್ಲಿ 2900 ಜನರನ್ನು 15 ವಿಮಾನಗಳಲ್ಲಿ ಕರೆತರಲಾಗಿದೆ. ಮುಂದಿನ 24 ಗಂಟೆಯಲ್ಲಿ ವಾಯುಸೇನೆಯ ಒಂದು ವಿಮಾನ ಸೇರಿದಂತೆ 13 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.ಆಪರೇಷನ್ ಗಂಗಾದಡಿ ಈವರೆಗೂ 13300 ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲಾಗಿದೆ.
ಉಕ್ರೇನ್‍ನ ಈಶಾನ್ಯ ಭಾಗದಲ್ಲಿರುವ ಸುಮಿ ನಗರದಲ್ಲಿರುವ ವಿದ್ಯಾರ್ಥಿಗಳನ್ನು ಕರೆತರುವುದು ತ್ರಾಸದಾಯಕವಾಗಿದೆ. ಪಶ್ಚಿಮ ಭಾಗದಲ್ಲಿ ಸಿಲುಕಿದವರನ್ನು ಸ್ಥಳಾಂತರಿಸಲಾಗಿದೆ. ತೀವ್ರ ಹೋರಾಟ ನಡೆಯುತ್ತಿರುವ ಖಾರ್ಕೀವ್‍ನ ಬಹುತೇಕರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿರುವುದಾಗಿ ತಿಳಿಸಲಾಗಿದೆ.

Articles You Might Like

Share This Article