ಬರ್ಮಿಂಗ್ಹ್ಯಾಮ್ , ಆ.05 : 2022ರ ಕಾಮನ್‌ವೆಲ್ತ್ ಕ್ರೀಡಾಕೂಟವು ಮುಕ್ತಾಯಗೊಳ್ಳುವ ಹಂತ ತಲುಪುತ್ತಿದೆ. ಇಲ್ಲಿಯವರೆಗೆ, ಭಾರತೀಯ ಅಥ್ಲೀಟ್‌ಗಳು 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 6 ಚಿನ್ನ, 7 ಬೆಳ್ಳಿ ಮತ್ತು 7 ಕಂಚು ಸೇರಿದಂತೆ 20 ಪದಕಗಳನ್ನು ಗೆದ್ದಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟವು ಆಗಸ್ಟ್ 8 ರಂದು ಮುಕ್ತಾಯಗೊಳ್ಳಲಿದೆ. ಪದಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ, ಇಂಗ್ಲೆಂಡ್ ಮತ್ತು ಕೆನಡಾ ನಂತರದ ಸ್ಥಾನದಲ್ಲಿದೆ. CWG ಮೆಡಲ್ ಟ್ಯಾಲಿ ಟೇಬಲ್‌ನಲ್ಲಿ ಭಾರತೀಯ ತಂಡವು 6ನೇ ಸ್ಥಾನದಿಂದ 7 ನೇ ಸ್ಥಾನಕ್ಕೆ ಇಳಿದಿದೆ.
ಸಂಕೇತ್ ಸರ್ಗರ್ ಅವರು CWG 2022 ಬರ್ಮಿಂಗ್ಹ್ಯಾಮ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದರು. ಪುರುಷರ ವೇಟ್‌ಲಿಫ್ಟಿಂಗ್‌ನಲ್ಲಿ (55 ಕೆಜಿ) ಬೆಳ್ಳಿ ಪದಕ ಪಡೆದರು. ಭಾರತದ ಪ್ರಸಿದ್ಧ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಚಾನು ಅವರು ಮಹಿಳೆಯರ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ (49 ಕೆಜಿ) ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದಾರೆ.