“ಭಾರತ ಅಮೆರಿಕದ ಅನಿವಾರ್ಯ ಪಾಲುದಾರ ರಾಷ್ಟ್ರ”

Social Share

ನವದೆಹಲಿ,ನ.11-ಭಾರತ ಅಮೆರಿಕದ ಅನಿವಾರ್ಯ ಪಾಲುದಾರ ರಾಷ್ಟ್ರ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಜೆನೆತ್ ಹೆಲೆನ್ ಹೇಳಿದ್ದಾರೆ. ಭಾರತ ಪ್ರವಾಸದಲ್ಲಿರುವ ಅವರು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿ ಮಾಡಿದರು.

ಇಬ್ಬರು ಭಾರತ- ಅಮೆರಿಕ ಆರ್ಥಿಕ ಪಾಲುದಾರಿಕೆ 9ನೇ ಸಭೆಯಲ್ಲಿ ಭಾಗವಹಿಸಿದರು. ಇದಕ್ಕೂ ಮೊದಲು ಜೆನತ್ ಅವರು ನೋಯ್ಡಾದಲ್ಲಿನ ಮೈಕ್ರೋಸಾಫ್ಟ್ ಭಾರತ ಅಭಿವೃದ್ಧಿ ಕೇಂದ್ರದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು.

ಅಮೆರಿಕದ ಖಜಾನೆ ಕಾರ್ಯದರ್ಶಿಯಾದ ಬಳಿಕ ಇದು ನನ್ನ ಮೊದಲ ಭೇಟಿಯಾಗಿದೆ. ಭಾರತ ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಮತ್ತು ಜಿ-20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಳ್ಳುವ ಸಮೀಪದಲ್ಲಿ ತಮ್ಮ ಭೇಟಿ ಗಮನಾರ್ಹವಾಗಿದೆ ಎಂದಿದ್ದಾರೆ.

ಭಾರತ ಅಮೆರಿಕದ ಅನಿವಾರ್ಯ ಪಾಲುದಾರರ ಎಂದು ಅಧ್ಯಕ್ಷ ಜೋಬಿಡನ್ ಈಗಾಗಲೇ ಹೇಳಿದ್ದಾರೆ. ನಾನು ಅದನ್ನು ಪುನಚ್ಚರಿಸುತ್ತೇನೆ. ಭಾರತ-ಅಮೆರಿಕ ನಡುವೆ 2021-22ನೇ ಸಾಲಿನಲ್ಲಿ ಸಂಬಂಧಗಳು ಮತ್ತಷ್ಟು ಸುಧಾರಣೆಯಾಗಿದ್ದು, ಚೀನಾವನ್ನು ಬದಿಗೆ ಸರಿಸಿವೆ ಎಂದಿದ್ದಾರೆ.

ರಾಜ್ಯದಲ್ಲಿ ಮೋದಿ ಅಭಿವೃದ್ಧಿ ನೆಪ.. ರಾಜಕೀಯ ಲಾಭದ ಜಪ..

ಅಮೆರಿಕ ಇಂಡೋ ಫೆಸಿಫಿಕ್ ಆರ್ಥಿಕ ಚೌಕಟ್ಟು(ಐಟಿಇಎಫ್) ರಚಿಸುವ ವೇಳೆ ಭಾರತ ಸಹಭಾಗಿಯಾಗಿತ್ತು. ಇದು ಭವಿಷ್ಯದಲ್ಲಿ ಆರ್ಥಿಕತೆ ವೃದ್ಧಿಗೆ ಬೆಂಬಲವಾಗಲಿದೆ ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಜನರಿಗೆ ಸೇವೆ ಸಲ್ಲಿಸಬೇಕಿದೆ. ಉಭಯ ರಾಷ್ಟ್ರಗಳ ಸಹಭಾಗಿತ್ವ, ಜಾಗತಿಕ ಆರ್ಥಿಕತೆಗೆ ರ್ನಿಷ್ಟ ರೂಪ ನೀಡಲು ಸಹಕಾರಿಯಾಗಲಿದೆ.

ಇಂಡೋ ಫೆಸಿಫಿಕ್‍ನ ಸಮೃದ್ಧಿ ಮತ್ತು ಭದ್ರತೆಗೆ ಬೆಂಬಲವಾಗಲಿದೆ. ಭವಿಷ್ಯದಲ್ಲಿ ಈ ಬಾಂಧವ್ಯ ಮುಂದುವರೆಯಲಿದೆ ಎಂದಿದ್ದಾರೆ. ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧ ಭವಿಷ್ಯದಲ್ಲಿ ದಾಖಲಾದ ಮಟ್ಟದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ನಮ್ಮ ದೇಶಗಳ ಜನ ಮತ್ತು ಕಂಪನಿಗಳು ಪರಸ್ಪರ ದೈನಂದಿನ ಅವಲಂಬನೆ ಆಧಾರದಲ್ಲಿದೆ. ಭಾರತೀಯರು ಸಂಪರ್ಕಕ್ಕಾಗಿ ನಿರಂತರವಾಗಿ ವಾಟ್ಸಪ್ ಬಳಸುತ್ತಿದ್ದಾರೆ. ಅದೇ ರೀತಿ ಅಮೆರಿಕನ್ ಕಂಪನಿಗಳು ಇನೋಸಿಸ್‍ನ ನಿರ್ವಹಣೆಯನ್ನು ಅವಲಂಬಿಸಿದೆ.

‘ಹಿಂದೂ’ ನಂತರ ‘ಸಾಂಭಾಜಿ’ ವಿವಾದಲ್ಲಿ ಸತೀಶ್ ಜಾರಕಿಹೊಳಿ

ಭಾರತದ ಆರ್ಥಿಕ ಮಾರುಕಟ್ಟೆ ವೇಗ ರ್ವಸಿದ್ದು, ಭೌಗೋಳಿಕ ಸೇರ್ಪಡೆ ಮತ್ತು ಅವಕಾಶಗಳ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿವೆ. ತಾಂತ್ರಿಕತೆ ಉತ್ಪಾದನೆ, ವ್ಯಾಪಾರ ಮತ್ತು ಹೂಡಿಕೆಯಲ್ಲಿ ಉತ್ತಮ ಸಂಬಂಧ ಹೊಂದಿದೆ ಎಂದಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ಯುದ್ಧ ವಿಶ್ವದ ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರಿದೆ. ಇದು ಯುದ್ಧದ ಯುಗವಲ್ಲ ಎಂದು ಪ್ರಧಾನಿ ಹೇಳಿಕೆಯನ್ನು ಅನುಮೋದಿಸುವುದಾಗಿ ಜನ ತಿಳಿಸಿದ್ದಾರೆ.

Articles You Might Like

Share This Article